(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 18. ಕೊರೋನಾ ಎರಡನೇ ಅಲೆಯ ಭೀತಿಯಲ್ಲಿ ಕರ್ನಾಟಕದ ಎಂಟು ಜಿಲ್ಲೆಗಳು ಡೇಂಜರ್ ಝೋನ್ ನಲ್ಲಿದ್ದು, ಈ ಕುರಿತು ಕೇಂದ್ರ ಸರ್ಕಾರ ವರದಿ ಮಾಡಿದೆ.
ಪ್ರಧಾನಿಯವರು ಈಗಾಗಲೇ ಕರ್ನಾಟಕದ ಮೂರು ಜಿಲ್ಲೆಗಳನ್ನು ಹೈ ರಿಸ್ಕ್ ಎಂದು ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ನೇತೃತ್ವದಲ್ಲಿ ಇನ್ನೊಂದು ರಿಪೋಟ್ ಇದೀಗ ಹೊರಬಂದಿದೆ. ಈ ವರದಿಯ ಪ್ರಕಾರ ಬೀದರ್ – 200% ಏರಿಕೆ, ಕಲಬುರಗಿ – 136%, ಧಾರವಾಡ – 100%, ದಕ್ಷಿಣ ಕನ್ನಡ -82%, ಬಳ್ಳಾರಿ – 63%, ಬೆಳಗಾವಿ – 57%, ಮೈಸೂರು – 40%, ಬೆಂಗಳೂರು ನಗರ – 25% ಮೊದಲಾದೆಡೆ ಕೊರೋನಾ ಹಾವಳಿ ಹೆಚ್ಚಳವಾಗಿದೆ. ಬೀದರ್ ಜಿಲ್ಲೆಯು ಮೊದಲನೇ ಸ್ಥಾನದಲ್ಲಿದ್ದು, ಕಳೆದ ಮೂರು ದಿನದಲ್ಲಿ 100 ಕ್ಕೂ ಹೆಚ್ಚು ಕೇಸ್ ಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕರೋನಾ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇನ್ನು ಈ ಭಾಗದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು ಇಂದು ಬಹುತೇಕ ನಿಯಮಗಳ ಬಗ್ಗೆ ಜಿಲ್ಲಾಧಿಕಾರಿ ಮಾರ್ಗಸೂಚಿ ಬಿಡುಗಡೆ ಮಾಡುವ ಸಾದ್ಯತೆಗಳಿವೆ ಎಂದು ತಿಳಿದು ಬಂದಿದೆ.