ಗುತ್ತಿಗಾರು: ಮೊಗ್ರ ದೇವಸ್ಥಾನದಲ್ಲಿ ನಿರಂತರ ಗಣಪತಿ ಹವನ ಕಾರ್ಯಕ್ರಮಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಮಾ. 18. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಕಾರ್ಯದ ಅಂಗವಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ 48 ದಿನಗಳ ಕಾಲ ನಿರಂತರವಾಗಿ ನಡೆಯುವ ಗಣಪತಿ ಹವನವು ಬುಧವಾರದಂದು ಆರಂಭಗೊಂಡಿತು.

 

ಮೊಗ್ರದಲ್ಲಿ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನದ ನಿರ್ಮಾಣ ಹಾಗೂ ದೈವಸ್ಥಾನಗಳ ಅಭಿವೃದ್ದಿ ಕಾರ್ಯ ನಡೆಯಲಿದೆ. ಈ ಹಿಂದೆ ನಡೆದ ಅಷ್ಟಮಂಗಲ ಚಿಂತನೆಯ ಪ್ರಕಾರ ನಿರ್ಮಾಣವಾಗುವ ಈ ಕಾರ್ಯವು ನಿರ್ವಿಘ್ನವಾಗಿ ನಡೆಯಲು ಹಾಗೂ ಊರಿನ ಸಮಸ್ತ ಭಕ್ತರ ಹಿತಕ್ಕಾಗಿ 48 ದಿನಗಳ ಕಾಲ ನಿರಂತರವಾಗಿ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಸ್ಥಳದಲ್ಲಿ ನಡೆಯಲಿದೆ. 14 ಬೈಲುಗಳ ಮೂಲಕ ನಿರಂತರವಾಗಿ ಈ ಕಾರ್ಯ ನಡೆಯಲಿದೆ. ಬುಧವಾರದಂದು ವೇ.ಮೂ.ಕೃಷ್ಣ ಭಟ್‌ ಮಡಪ್ಪಾಡಿ ಅವರು ಗಣಪತಿ ಹವನ ನೆರವೇರಿಸಿದರು. ಈ ಸಂದರ್ಭ ಮೊಗ್ರ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಚಿಕ್ಮುಳಿ, ಗೌರವಾಧ್ಯಕ್ಷ ಗಂಗಾಧರ ಭಟ್‌ ಪುಚ್ಚಪ್ಪಾಡಿ, ಗೌರವ ಸಲಹೆಗಾರರುಗಳಾದ ವೆಂಕಟ್ರಮಣ ಎಂ ಎನ್‌, ದೊಡ್ಡಣ್ಣ ಗೌಡ ಚಿಕ್ಮುಳಿ, ಪ್ರಧಾನ ಸಂಚಾಲಕ ಸತ್ಯನಾರಾಯಣ ಮೊಗ್ರ, ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಉಮೇಶ್‌ ಮಕ್ಕಿ, ಕೋಶಾಧಿಕಾರಿ ಕುಮಾರಸ್ವಾಮಿ ಕಿನ್ನಿಕುಮೇರಿ, ಪ್ರಧಾನ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ, ಸಮಿತಿ ಉಪಾಧ್ಯಕ್ಷರುಗಳಾದ ರಾಧಾಕೃಷ್ಣ ತುಪ್ಪದಮನೆ, ಚನ್ನಕೇಶವ ಕಮಿಲ, ಸೀತಾರಾಮ ಚಿಕ್ಮುಳಿ ಮೊದಲಾದವರು ಉಪಸ್ಥಿತರಿದ್ದರು.

Also Read  ಡೇ ಕೇರ್‌ನಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ      ➤ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ       

error: Content is protected !!
Scroll to Top