ಕೊಯಿಲ: ವಿದ್ಯುತ್ ಲೈನ್ ಚೇಂಜ್ ಓವರ್ ನಿಂದ ಬೆಂಕಿ *➤ ರಬ್ಬರ್ ಗಿಡಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ಮಾ.16. ಕೊೈಲ ಗ್ರಾಮದ ಸಬಳೂರು ಸರ್ಕಾರಿ ಶಾಲಾ ಪಕ್ಕದ ಖಾಸಗಿ ವ್ಯಕ್ತಿಯೋರ್ವರ ರಬ್ಬರ್ ತೋಟಕ್ಕೆ ಸೋಮವಾರ ಸಾಯಂಕಾಲ ಆಕಸ್ಮಿಕವಾಗಿ ಬೆಂಕಿ ತಗುಲಿ ರಬ್ಬರ್ ಗಿಡಗಳಿಗೆ ಹಾನಿಯಾದ ಘಟನೆ ನಡೆದಿದೆ.

ರಬ್ಬರ್ ತೋಟದ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ನಲ್ಲಿರುವ ಚೇಂಜ್ ಓವರ್ ಸ್ವಿಚ್ ಬಳಿ ಬೆಂಕಿ ಕಾಣಿಸಿಕೊಂಡು ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೊೈಲ ಗ್ರಾಮ ಪಂಚಾಯಿತಿ ಸದಸ್ಯ ಚಿದಾನಂದ ಪಾನ್ಯಾಲು ನೇತೃತ್ವದಲ್ಲಿ ಸ್ಥಳಿಯರ ತಂಡ ಬೆಂಕಿ ನಂದಿಸಲು ಪ್ರಯತ್ನಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಬಳಿಕ ಆಗಮಿಸಿದ ಅಗ್ನಿ ಶಾಮಕದಳ ಸಿಬ್ಬಂದಿಗಳು ಬೆಂಕಿಯನ್ನು ತಹಬದಿಗೆ ತಂದರು. ಮೆಸ್ಕಾಂ ಸಿಬ್ಬಂದಿ ವಿಶ್ವನಾಥ ರಾಮಕುಂಜ ಇದ್ದರು.

Also Read  ನೂಜಿಬಾಳ್ತಿಲ: ಸೇತುವೆ ತಡೆಗೋಡೆ ಕುಸಿತ ➤ ದುರಸ್ಥಿಗೆ ಆಗ್ರಹ

 

 

error: Content is protected !!
Scroll to Top