ಕರಾವಳಿ ಕಾಂಗ್ರೆಸ್ ನಾಯಕರ ಕಚ್ಚಾಟ ಮುಖ್ಯಮಂತ್ರಿಯ ಸಮ್ಮುಖದಲ್ಲಿ ಸ್ಪೋಟ ► ನೂಕಾಟ ತಳ್ಳಾಟಕ್ಕೆ ಸುಸ್ತಾದ ಪೊಲೀಸರು

(ನ್ಯೂಸ್ ಕಡಬ) newskadaba.com ಮಂಗಳೂರು, ಅ.22. ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಕಾಂಗ್ರೆಸ್ ನಾಯಕ ಹಾಗೂ ಸರ್ಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾ ಮತ್ತು ಅಭಯಚಂದ್ರ ಜೈನ್ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಿನಲ್ಲೇ ತಳ್ಳಾಟ ನಡೆದಿದೆ.

ಮುಖ್ಯಮಂತ್ರಿಯವರು ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ಮುಖ್ಯಮಂತ್ರಿ ಪಕ್ಕ ನಿಲ್ಲಲು ಇಬ್ಬರು ನಾಯಕರು ಪೈಪೋಟಿ ನಡೆಸಿದರು. ಈ ಸಂದರ್ಭದಲ್ಲಿ ಐವನ್ ಡಿ ಸೋಜಾ ಅವರನ್ನು ಅಭಯಚಂದ್ರ ಜೈನ್ ತಳ್ಳಿದ್ದಾರೆ.

ಮೂಡಬಿದ್ರೆ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯ ಟಿಕೆಟ್ ಅಕಾಂಕ್ಷಿಯಾಗಿರುವ ಐವನ್ ಡಿಸೋಜಾ ಅವರು ಈಗಾಗಲೇ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಈ ಕ್ಷೇತ್ರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ತನ್ನ ಬದಲಿಗೆ ಕಣಕ್ಕೆ ಇಳಿಸಲು ಹಾಲಿ ಶಾಸಕ ಅಭಯಚಂದ್ರ ಜೈನ್ ಚಿಂತನೆ ನಡೆಸಿದ್ದರೆನ್ನಲಾಗಿದ್ದು, ಮಿಥುನ್ ರೈಯವರ ಹೆಸರನ್ನು ಮುಖ್ಯಮಂತ್ರಿಗಳ ಈ ಹಿಂದಿನ ಭೇಟಿಯಲ್ಲಿ ತೇಲಿಬಿಟ್ಟಿದ್ದಾರೆ.

Also Read  ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ➤ ಸುಳ್ಯ PFI ಕಚೇರಿ ಸಂಪೂರ್ಣ ಜಪ್ತಿ ಮಾಡಿದ NIA

ಇದು ಉಭಯ ನಾಯಕರ ನಡುವೆ ಪರಸ್ಪರ ಭಿನ್ನಾಭಿಪ್ರಾಯ, ಪೈಪೋಟಿಗೆ ಕಾರಣವಾಗಿದೆ. ಈ ಪೈಪೋಟಿಯು ಇಂದಿನ ಭಿನ್ನಮತ ಸ್ಪೋಟದ ಕಾರಣವಾಗಿದೆ.

error: Content is protected !!
Scroll to Top