ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.15. ಕೆಲಸಕ್ಕೆಂದು ಮನೆಯಿಂದ ತೆರಳಿದ ಯುವಕನೋರ್ವ ಕೆಲಸಕ್ಕೂ ತೆರಳದೆ, ಮನೆಗೂ ಬಾರದೆ ನಾಪತ್ತೆಯಾಗಿರುವ ಘಟನೆ ಕಡಬದಿಂದ ವರದಿಯಾಗಿದೆ.

ನಾಪತ್ತೆಯಾದ ಯುವಕನನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕುತ್ಯಾಡಿ ನಿವಾಸಿ ಕಾಂತಪ್ಪ ಗೌಡ ಎಂಬವರ ಪುತ್ರ ದೇವಿಪ್ರಸಾದ್(25) ಎಂದು ಗುರುತಿಸಲಾಗಿದೆ. ಕಡಬ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ದೇವಿಪ್ರಸಾದ್ ಮಾರ್ಚ್ 09 ರಂದು ಕೆಲಸಕ್ಕೆಂದು ಮನೆಯಿಂದ ತೆರಳಿದ್ದು, ಆ ಬಳಿಕ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಯಾವುದೋ ವೈಯಕ್ತಿಕ ಸಮಸ್ಯೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗಿರಬಹುದೆಂದು ಶಂಕಿಸಲಾಗಿದೆ. ಯುವಕನ ಬಗ್ಗೆ ಮಾಹಿತಿ ಕಂಡುಬಂದಲ್ಲಿ ಕಡಬ ಪೊಲೀಸ್ ಠಾಣೆ 9480805364 ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಕಡಬ ಠಾಣಾ ಪ್ರಕಟಣೆ ತಿಳಿಸಿದೆ.

Also Read  ನಕ್ಸಲ್ ಸೂಕ್ಷ್ಮ ಪ್ರದೇಶವಾದ ಬಿಳಿನೆಲೆ, ಕೈಕಂಬಗಳಿಗೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ ► ಸಾರ್ವಜನಿಕರೊಂದಿಗೆ ಸಂವಾದ

 

 

error: Content is protected !!
Scroll to Top