ಆತೂರು: ಮಾ. 18 ರಂದು ಶಂಸುಲ್ ಉಲಮಾ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಆತೂರು, ಮಾ. 15. ಶಂಸುಲ್ ಉಲಮಾ ಕ್ರಿಯಾ ಸಮಿತಿ ಆತೂರು ಇದರ 7ನೇ ವಾರ್ಷಿಕೋತ್ಸವದ ಪ್ರಯುಕ್ತ ಮಾರ್ಚ್ 18 ರಂದು ಶಂಸುಲ್ ಉಲಮಾ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮವು ಶಂಸುಲ್ ಉಲಮಾ ವೇದಿಕೆ, ಮುಹ್ಯುದ್ದೀನ್ ಜುಮಾ ಮಸೀದಿ ಆತೂರು ವಠಾರದಲ್ಲಿ ನಡೆಯಲಿದೆ.

ಮಗ್ರಿಬ್ ನಮಾಝಿನ ನಂತರ ಅಸ್ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಫೈಝಿ ಅತೂರು ರವರ ನೇತೃತ್ವದಲ್ಲಿ ಶಂಸುಲ್ ಉಲಮಾ ಮೌಲಿದ್ ಪಾರಾಯಣ ನಡೆಯಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಹಾಗು ದುಆವನ್ನು ಅಸ್ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಗಳ್ ಫೈಝಿ ಅತೂರುರವರು ನೆರೆವೇರಿಸಲಿದ್ದಾರೆ. ಆತೂರು ಎಂ.ಜೆ.ಎಂ ಖತೀಬರಾದ ಬಹು/ ಕೆ ಎಂ ಎಚ್ ಫಾಝಿಲ್ ಹನೀಫಿ ಉದ್ಘಾಟಿಸಲಿರುವರು. ಮೂಸಾ ಮುಸ್ಲಿಯಾರ್ ಆತೂರು ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ. SKSSF ಇಬಾದ್ ಕೇಂದ್ರೀಯ ಸಮಿತಿ ಇದರ ಕನ್ವೀನರ್ ಅಪ್ರತಿಮ ಮಾತಿನ ಮೋಡಿಗಾರ ಬಹು| ಅಸ್ಲಂ ಅಝ್ಹರಿ ಪೊಯ್ತುಂಕಡವು ಕಣ್ಣೂರು ಕೇರಳ ಇವರು ಮುಖ್ಯಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಉಲಮಾ, ಉಮರಾ ನೇತಾರರೂ ಸಾಮಾಜಿಕ ಕಾರ್ಯಕರ್ತರೂ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Also Read  ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು..!

error: Content is protected !!
Scroll to Top