ಮಂಗಳೂರು: ಕ್ಯಾಂಪಸ್ ಫ್ರಂಟ್ ವತಿಯಿಂದ ಝೀರೋ ಡ್ರಾಪ್ಔಟ್ ಅಭಿಯಾನದ ಅಂಗವಾಗಿ ಜಿಲ್ಲಾದ್ಯಂತ ಹಲವೆಡೆ ಜಾಗೃತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 15. ಸಮಾಜದಲ್ಲಿ ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದೊಂದಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ‘ಉತ್ತಮ ಭವಿಷ್ಯಕ್ಕಾಗಿ ಕಾರ್ಯ ಪ್ರವೃತ್ತರಾಗೋಣ’ ಎಂಬ ಘೋಷಾ ವಾಕ್ಯದೊಂದಿಗೆ “ಝೀರೋ ಡ್ರಾಪ್ ಔಟ್” ಎಂಬ ಅಭಿಯಾನವನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿದೆ. ಈ ಅಭಿಯಾನದ ಭಾಗವಾಗಿ ಕ್ಯಾಂಪಸ್ ಫ್ರಂಟ್ ಮಂಗಳೂರು ಗ್ರಾಮಾಂತರ ವತಿಯಿಂದ ಭಿತ್ತಿಪತ್ರ ಪ್ರದರ್ಶಿಸಿ ಜಾಗೃತಿ ಅಭಿಯಾನವು ಶಾಫಿ ಜುಮಾ ಮಸ್ಜಿದ್ ಮುಲ್ಕಿ, ಹಂಡೇಲ್ ಜುಮಾ ಮಸ್ಜಿದ್, ಪುತ್ತಿಗೆ ಜುಮಾ ಮಸ್ಜಿದ್, ಸೂರಲ್ಪಾಡಿ ಮುಂಭಾಗದಲ್ಲಿ ನಡೆಯಿತು.

ಕೊರೋನಾ ಲಾಕ್-ಡೌನ್ ನಂತರ ರಾಜ್ಯದಲ್ಲೇ ಸುಮಾರು ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲಾ – ಕಾಲೇಜುಗಳಿಗೆ ಮರು ದಾಖಲಾತಿಗಳು ಕಡಿಮೆ ಆಗಿದ್ದು ಶಾಲಾ ಕಾಲೇಜು ಅರ್ಧದಲ್ಲಿ ಮೊಟಕುಗೊಳಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬದಲಾಗಿ ಕುಟುಂಬ ನಿರ್ವಹಣೆ ಮಾಡಲು ಬೇಸಾಯ, ಕೂಲಿ, ಕಾರ್ಖಾನೆಗಳಿಗೆ ದುಡಿಮೆಗೆ ಹೋಗುತ್ತಿದ್ದಾರೆ, ಇವರನ್ನು ಮರು ಶಾಲೆಗೆ ಕಳುಹಿಸಲು ನಮ್ಮೊಂದಿಗೆ ನೀವೂ ಕೈ ಜೋಡಿಸಬೇಕೆಂದು ಸಾರ್ವಜನಿಕರಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಜಿಲ್ಲಾ ಸಮಿತಿಯು ತಿಳಿಸಿತು.

Also Read  ಕಡಬ: ದೀಪಾವಳಿ ಪ್ರಯುಕ್ತ 'ಎಸ್ಇಎಸ್ ಬರ್ಲಿನ್' ಮೆನ್ಸ್ ಶೋರೂಂ ನಲ್ಲಿ ಭರ್ಜರಿ ಆಫರ್..!

error: Content is protected !!
Scroll to Top