ಕಡಬ: ಇನ್ನೋವಾ ಹಾಗೂ ಆಲ್ಟೋ 800 ನಡುವೆ ಢಿಕ್ಕಿ ➤ ಕಾರಿನಲ್ಲಿ ಕೋವಿ ಪತ್ತೆ | ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿ

(ನ್ಯೂಸ್ ಕಡಬ) newskadaba.com ಕಡಬ, ಮಾ.13. ಇನ್ನೋವಾ ಕಾರು ಹಾಗೂ ಮಾರುತಿ 800 ಕಾರಿನ ನಡುವೆ ಕಡಬ ತಾಲೂಕಿನ ಆತೂರು ಸಮೀಪದ ಗೋಳಿತ್ತಡಿ ಎಂಬಲ್ಲಿ ತಡರಾತ್ರಿ ಢಿಕ್ಕಿಯುಂಟಾಗಿದ್ದು, ಈ ವೇಳೆ ಕಾರಿನಲ್ಲಿ ಕೋವಿ ಕಂಡುಬಂದಿದ್ದು,‌ ಕೆಲಕಾಲ ಆತಂಕಕ್ಕೆ ಕಾರಣವಾಯಿತು.

ಹಿರೇಬಂಡಾಡಿ ನಿವಾಸಿ ರಾಜೇಶ್ ಎಂಬಾತ ಶುಕ್ರವಾರ ತಡರಾತ್ರಿ ತನ್ನ ಮಾರುತಿ 800 ಕಾರಿನಲ್ಲಿ ಕೋವಿಯನ್ನು ಇಟ್ಟುಕೊಂಡು ತೆರಳುತ್ತಿದ್ದ ವೇಳೆ ತಾನು ಚಲಾಯಿಸುತ್ತಿದ್ದ ಕಾರು ಗೋಳಿತ್ತಡಿ ಎಂಬಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಢಿಕ್ಕಿಯಾಗಿದೆ. ಕಾರಿನಲ್ಲಿ ಕೋವಿ ಇರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಕಡಬ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ರಾಜೇಶ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮನಾಯ್ಕ್, ಕಾರಿನಲ್ಲಿದ್ದ ಕೋವಿಗೆ ತಾಲೂಕು ಮಟ್ಟದ ಪರವಾನಿಗೆ ಇರುವುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದ್ದು, ಪರವಾನಿಗೆಯನ್ನು ಪರಿಶೀಲಿಸಲಾಗುವುದು. ಅಲ್ಲದೆ ಅಮಲು ಪದಾರ್ಥ ಸೇವಿಸಿ ಅಪಘಾತ ನಡೆಸಿದ ಬಗ್ಗೆ ಈತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Also Read  ಫೇಸ್‌ಬುಕ್‌ ನಲ್ಲಿ ಏಸುಕ್ರಿಸ್ತರ ಅವಹೇಳನ ► ಆರೋಪಿ ಸುಳ್ಯ ನಿವಾಸಿ ಬಂಧನ

 

 

error: Content is protected !!
Scroll to Top