ಕೈಕಂಬ: ಅನನ್ಯ ಚೇತನ ಫೌಂಡೇಶನ್(ರಿ) ವತಿಯಿಂದ ಬ್ಯಾರಿಕೇಡ್ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕೈಕಂಬ, ಮಾ. 11.‌ ಅನನ್ಯ ಚೇತನ ಫೌಂಡೇಷನ್ (ರಿ) ಕೈಕಂಬ ಇದರ ವತಿಯಿಂದ ಗುರುವಾರದಂದು ಕೈಕಂಬ ರಸ್ತೆಗೆ ತಡೆಬೇಲಿಗಳನ್ನು ಆರಕ್ಷಕ ಠಾಣೆಗೆ ಹಸ್ತಾಂತರ ಮಾಡಲಾಯಿತು.


ಈ ಸಂದರ್ಭದಲ್ಲಿ ಕಡಬ ಠಾಣಾಧಿಕಾರಿಗಳಾದ ರುಕ್ಮ ನಾಯಕ್, ಕೈಕಂಬ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ತುಕಾರಾಮ ಸೂಡ್ಲು, ಮಣಿಭಾಂಡ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯ ಕುಮಾರ್ ನಡುತೋಟ, ಲೋಕೊಪಯೋಗಿ ಇಲಾಖೆಯ ಗಣೇಶ್, ಹಿರಿಯರಾದ ಧರ್ಮಪಾಲ ದಂಬೆಕೋಡಿ ಹಾಗೂ ಮಾಜಿ ಪಂಚಾಯತ್ ಸದಸ್ಯರಾದ ಶಿವಪ್ರಸಾದ್ ಸಬೆಯಲ್ಲಿ ಉಪಸ್ಥಿತರಿದ್ದರು ಹಾಗೂ ಅನನ್ಯ ಚೇತನದ ಸದಸ್ಯರು, ಹಿತೈಷಿಗಳು, ಮಾಧ್ಯಮ ಮಿತ್ರರು ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Also Read  ಕಡಬ: ಜ್ವರ ಉಲ್ಬಣಗೊಂಡು ಯುವಕ ಮೃತ್ಯು ► ಇಲಿಜ್ವರಕ್ಕೆ ಬಲಿಯಾದರೇ ಹರೀಶ್..??

error: Content is protected !!
Scroll to Top