(ನ್ಯೂಸ್ ಕಡಬ) newskadaba.com ಕಡಬ, ಮಾ.11. ಜಾತಿ, ಮತ, ಭೇದವಿಲ್ಲದೆ ಹಲವಾರು ಕಷ್ಟ ಕಾರ್ಪಣ್ಯಗಳ ಮುಕ್ತಿಗೆ ಹೆಸರುವಾಸಿಯಾದ ಇತಿಹಾಸ ಪ್ರಸಿದ್ಧ ನೆಕ್ಕಿತ್ತಡ್ಕ ಮಖಾಂ ಉರೂಸ್ ಸಮಾರಂಭವು ಮಾರ್ಚ್ 08 ಸೋಮವಾರದಂದು ಆರಂಭಗೊಂಡಿದ್ದು, ಇಂದು ಸಮಾರೋಪ ನಡೆಯಲಿದೆ.
ಅಪರಾಹ್ನ 3 ಗಂಟೆಯಿಂದ ಖತಮುಲ್ ಕುರ್ ಆನ್ ಪಾರಾಯಣ ನಡೆಯಲಿದ್ದು, ಅಸರ್ ನಮಾಝ್ ಬಳಿಕ ಮೌಲೀದ್ ಪಾರಾಯಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ದಾಯಿರ ಕಾರ್ಯಕ್ರಮ ಹಾಗೂ 7.30 ರಿಂದ ದಫ್ ಕಾರ್ಯಕ್ರಮ ಜರಗಲಿದೆ. ದುವಾಃಗೆ ಬಹು| ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ನೇತೃತ್ವ ನೀಡಲಿದ್ದು, ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು ಅಬ್ದುಸ್ಸಲಾಂ ಮದನಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಬಹು| ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿಯವರಿಂದ ಔಲಿಯಾಗಳು ಮತ್ತು ಕರಾಮತ್ ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ಜರಗಲಿದೆ ಎಂದು ಉರೀಸ್ ಸಮಿತಿಯ ಪ್ರಕಟಣೆ ತಿಳಿಸಿದೆ.