ಬೆಳ್ತಂಗಡಿ: ಲ್ಯಾಪ್‌ಟಾಪ್ ಕಳವುಗೈದು ಪರಾರಿಯಾಗಲೆತ್ನಿಸುತ್ತಿದ್ದ ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 11. ಇಲ್ಲಿನ ಎಸ್.ವಿ.ಎಸ್ ಕಾಲೇಜು ವಿದ್ಯಾರ್ಥಿನಿಯ ಲ್ಯಾಪ್ ಟಾಪ್ ಕಳವುಗೈದು ಪರಾರಿಯಾಗಲು ಯತ್ನಿಸಿದ್ದ ಆರೋಪಿಯೋರ್ವನನ್ನು ಬಂಧಿಸಿದ ಘಟನೆ ನಡೆದಿದೆ.


ಬಂಧಿತನನ್ನು ದಾವಣಗೆರೆ ಮೂಲದ ಮಂಜುನಾಥ್ ಯಾನೆ ಮಂಜು (45) ಎಂದು ಗುರುತಿಸಲಾಗಿದೆ. ತಾಲೂಕಿನ ಅಲ್ಲಿಪಾದೆ ನಿವಾಸಿ, ಬಂಟ್ವಾಳ ಎಸ್.ವಿ.ಎಸ್ ಕಾಲೇಜು ವಿದ್ಯಾರ್ಥಿನಿ ಮಾ. 08 ರಂದು ಕಾಲೇಜು ಬಿಟ್ಟು ಬಿಸಿರೋಡ್ ನಿಂದ ಬಸ್ಸಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಬಸ್ಸಿನ ಸೀಟಿನಲ್ಲಿ ಲ್ಯಾಪ್‍ಟಾಪ್ ಇಟ್ಟು ಅಂಗಡಿಗೆ ತೆರಳಿದ್ದ ವೇಳೆ ಲ್ಯಾಪ್‍ಟಾಪ್ ಕಳ್ಳತನವಾಗಿತ್ತು. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿಯು ರೈಲು ಮುಖಾಂತರ ಊರಿಗೆ ತೆರಳಲು ಸಿದ್ದತೆ ನಡೆಸುತ್ತಿದ್ದಾಗ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

Also Read  ಮಲೆನಾಡಲ್ಲಿ ನಿಲ್ಲದ ಹುಲಿ ದಾಳಿ!! ➤ 50ಕ್ಕೂ ಹೆಚ್ಚು ಹಸುಗಳು ಬಲಿ

 

error: Content is protected !!
Scroll to Top