(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ. 11. ಇತಿಹಾಸ ಪ್ರಸಿದ್ಧ ಉಪ್ಪಿನಂಗಡಿ ತೆಕ್ಕಾರು ಸಮೀಪದ ಮೂಡಡ್ಕ ಉರೂಸ್ ಗೆ ಇಂದು (ಮಾ.11) ಚಾಲನೆ ನೀಡಲಿದ್ದು, ಮಾರ್ಚ್ 14 ಆದಿತ್ಯವಾರದಂದು ಸಮಾರೋಪಗೊಳ್ಳಲಿದೆ.
ಮಾರ್ಚ್ 11 ಗುರುವಾರ ರಾತ್ರಿ ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ ದುವಾಶಿರ್ವಚನಗೈಯಲಿದ್ದು, ಖ್ಯಾತ ವಾಗ್ಮಿ ಪೇರೋಡ್ ಮುಹಮ್ಮದ್ ಅಝ್ಹರಿ ಮುಖ್ಯ ಪ್ರಬಾಷಣಗೈಯಲಿದ್ದಾರೆ. ಮಾರ್ಚ್ 12 ಶುಕ್ರವಾರ ರಾತ್ರಿ ಶೈಖುನಾ ಪೆರ್ನೆ ಉಸ್ತಾದ್ ದುಆ ನೆರವೇರಿಸಲಿದ್ದು, ಹುಸೈನ್ ಸಅದಿ ಕೆ.ಸಿರೋಡ್ ಧಾರ್ಮಿಕ ಪ್ರವಚನಗೈಯಲಿದ್ದಾರೆ. ಮಾರ್ಚ್ 13 ರಂದು ಜಲಾಲಿಯ್ಯ ಮಜ್ಲಿಸ್ ಮತ್ತು ಮೂಡಡ್ಕ ವಿದ್ಯಾ ಸಂಸ್ಥೆಯ ಸ್ಥಾಪಕ ಶೈಖುನಾ T.H ಉಸ್ತಾದರ ಆಂಡ್ ನೇರ್ಚೆ ನಡೆಯಲಿದ್ದು, ದ.ಕ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಖುರ್ರತುಸ್ಸಾದಾತ್ ಕೂರತ್ ತಂಙಳ್ ದುವಾಶೀರ್ವಚನ ನೀಡಲಿದ್ದು, ಸಯ್ಯದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ಜಲಾಲಿಯ್ಯ ಮಜ್ಲೀಸ್ ಗೆ ನೇತೃತ್ವ ನೀಡಲಿದ್ದಾರೆ.
ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಬಾಷಣ ನಡೆಸಲಿದ್ದು, ಮೂಡಡ್ಕ ಸಂಸ್ಥೆಯ ಜನರಲ್ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ಅನುಸ್ಮರಣಾ ಬಾಷಣ ನಡೆಸಲಿದ್ದಾರೆ. ಮಾರ್ಚ್ 14 ಆದಿತ್ಯವಾರ ಬೆಳಿಗ್ಗೆ 10 ರಿಂದ ಖತಮುಲ್ ಕುರ್-ಆನ್ ಮಜ್ಲಿಸ್, ಹಳೆ ವಿದ್ಯಾರ್ಥಿ ಸಂಗಮ, ಗಲ್ಫ್ ಮೀಟ್ ಹಾಗೂ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದೆ. ಅಸ್ಸಯ್ಯದ್ ಇಸ್ಮಾಯಿಲ್ ಅಲ್-ಹಾದಿ ತಂಙಳ್ ಅಧ್ಯಕ್ಷತೆ ವಹಿಸಲಿದ್ದು, ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕೂರಿಕುಝಿ ನೇತೃತ್ವ ನೀಡಲಿದ್ದಾರೆ. ಸಯ್ಯದ್ ಪಾಟ್ರಕೋಡಿ ತಂಙಳ್ ಖತಮುಲ್ ಕುರ್-ಆನ್ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆ. ಖ್ಯಾತ ವಾಗ್ಮಿ ಎಂ.ಎ ಸ್ವಲಾವುದ್ದೀನ್ ಸಖಾಫಿ ಮಾಡನ್ನೂರು ನೆರೆದ ಸಾವಿರಾರು ಜನರನ್ನುದ್ದೇಶಿಸಿ ಮುಖ್ಯ ಪ್ರಬಾಷಣಗೈಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.