(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ. 11. ರಾಜ್ಯದ ಪ್ರಸಿದ್ಧ ದೇಗುಲವೆಂಬ ಖ್ಯಾತಿಗೆ ಪಾತ್ರವಾಯಿತು ರಾಜ್ಯದ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಎರಡು ಪಂಥಗಳ ನಡುವಿನ ಗುದ್ದಾಟ ಶಿವರಾತ್ರಿ ಆಚರಣೆಗೆ ತಡೆ ತಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ತಾಲೂಕಿನಲ್ಲಿರೋ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಶಿವರಾತ್ರಿ ಆಚರಣೆಗೆ ಸಿದ್ದತೆ ನಡೆದಿತ್ತಾದರೂ ಇಲ್ಲಿ ವಿಶೇಷ ಶಿವರಾತ್ರಿ ಆಚರಣೆಗೆ ಹೈಕೋರ್ಟ್ ತಡೆ ನೀಡಿದೆ. ಕುಕ್ಕೆಯಲ್ಲಿ ಶೈವರು ಮತ್ತು ಮಧ್ವರ ನಡುವೆ ಭಿನ್ನಾಭಿಪ್ರಾಯವಿದ್ದರೂ ಧಾರ್ಮಿಕ ದತ್ತಿ ಇಲಾಖೆಯು ಶಿವರಾತ್ರಿ ಆಚರಣೆಯ ಪೂಜಾ ಕೈಂಕರ್ಯವನ್ನು ನಡೆಸಲು ಅವಕಾಶ ಕಲ್ಪಿಸಿತ್ತು. ಹೀಗಾಗಿ ಶಿವರಾತ್ರಿ ವೇಳೆ ಲ್ವಾರ್ಚನೆ, ರುದ್ರಪಾರಾಯಣ, ರುದ್ರಹೋಮ ಹಮ್ಮಿಕೊಳ್ಳಲಾಗಿದ್ದು, ಇದನ್ನು ಪ್ರಶ್ನಿಸಿ ಬೆಂಗಳೂರು ಮೂಲದ ಮುರುಳಿಧರ್ ಹಾಗೂ ವಿಜಯಸಿಂಹಾಚಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ಪರಿಶೀಲಿಸಿದ ಹೈಕೋರ್ಟ್ ಹಳೆ ಸಂಪ್ರದಾಯದಂತೆ ನವರಾತ್ರಿ ಆಚರಿಸಿ, ಆದರೆ ಹೊಸ ಸಂಪ್ರದಾಯ ಬೇಡ ಎಂದಿದೆ.