(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 11. ಕರ್ನಾಟಕ ರಾಜ್ಯದಲ್ಲಿ ಮುಸಲ್ಮಾನರಿಗೆ ಪ್ರವರ್ಗ -2 ‘ಬಿ’ಯಲ್ಲಿ ಸೇರಿಸಿ 4% ಮೀಸಲಾತಿಯನ್ನು ಕಲ್ಪಿಸಿರುತ್ತದೆ. ಈ ಮೀಸಲಾತಿ ತುಂಬಾ ಕಡಿಮೆಯಾಗಿದ್ದು, ಸಮುದಾಯದ ಈಗಿನ ಜನಸಂಖ್ಯೆ ಮೀಸಲಾತಿಯನ್ನು 10% ಹೆಚ್ಚಿಸಬೇಕೆಂದು ರಾಜ್ಯ ಸರಕಾರಕ್ಕೆ ಮನವಿಯನ್ನು ನೀಡಲಾಯಿತು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಕಲ್ಪಿಸಲಾಗಿರುವ ಮೀಸಲಾತಿಯನ್ನು ಹಿಂಬಾಗಿಲಿನ ಮೂಲಕ ಕಬಳಿಸಲು ರಾಜಿಕೀಯ ಬೆಂಬಲದೊಂದಿಗೆ ನಡೆಯುತ್ತಿರುವ ಹುನ್ನಾರವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಭೆ ತೀವ್ರವಾಗಿ ಖಂಡಿಸಿತು. ಸಮಿತಿ ಸಂಚಾಲಕರಾದ ವಕೀಲರು ಸುಲೈಮಾನ್.ಎಸ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯ ನಂತರ ಮೀಸಲಾತಿಯ ಬಗ್ಗೆ ರಾಜ್ಯ ಮುಖ್ಯ ಮಂತ್ರಿಗಳಿಗೆ ಜಿಲ್ಲಾ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ಸುಲೈಮಾನ್ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು. ಇವರೊಂದಿಗೆ ಕರೀಮ್ ಕಡಬ, ಖತಾರ್ ಇಬ್ರಾಹಿಂ ಹಾಜಿ ಸುಳ್ಯ ಮತ್ತು ರಿಯಾಝ್ ಹರೇಕಳ ಉಪಸ್ಥಿತರಿದ್ದರು.