ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ ➤ ಕೊಲೆ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 11. ಪಿಯುಸಿ ವಿದ್ಯಾರ್ಥಿನಿಯೋರ್ವಳ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಸುತ್ತ ಸಂಶಯ ವ್ಯಕ್ತವಾಗಿದ್ದು, ಕೊಲೆ ಆರೋಪ ಕೇಳಿಬರುತ್ತಿದೆ.

ಮೃತಳನ್ನು ಮಂಗಳೂರು ಹೊರವಲಯದ ಕುಂಪಲದ ಆಶ್ರಯ ಕಾಲನಿಯ ನಿವಾಸಿ ಪ್ರೇಕ್ಷಾ (17) ಎಂದು ಗುರುತಿಸಲಾಗಿದೆ. ಈಕೆ ಮಂಗಳೂರು ನಗರದ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದು, ಮಾಡೆಲಿಂಗ್ ನಲ್ಲಿ ಅಸಕ್ತಿ ಹೊಂದಿದ್ದ ಈಕೆ ಪೋಟೋ ಶೂಟ್ ಹಿನ್ನೆಲೆ ಬೆಂಗಳೂರಿಗೆ ತೆರಳಲು ಬುಧವಾರದಂದು ಕಾಲೇಜಿಗೆ ರಜೆ ಹಾಕಿ‌ ಸಿದ್ದತೆ ಮಾಡಿಕೊಂಡಿದ್ದಳು ಎನ್ನಲಾಗುತ್ತಿದೆ. ಇತ್ತ ಆಕೆಯ ತಾಯಿ ಅಂಗನವಾಡಿ ಕೆಲಸಕ್ಕೆಂದು ತೆರಳಿದ್ದು, ಮಧ್ಯಾಹ್ನದ ಊಟಕ್ಕೆ ಮನೆಗೆ ಬಂದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆದರೆ ಈಕೆಯ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರೇಕ್ಷಾಳ ತಾಯಿ‌ ಬುಧವಾರ ಮನೆಯಿಂದ ಹೊರ ಹೋಗುತ್ತಿದ್ದಂತೆಯೇ ಮನೆಗೆ ಮೂವರು ಬಂದಿದ್ದು, ಇವರಿಂದಲೇ ಈ ಕೃತ್ಯ ನಡೆದಿದ್ಯಾ ಅಲ್ಲ ಈಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳಾ ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಾಗಿದೆ. ಸ್ಥಳಕ್ಕೆ ಭೇಟಿ‌ ನೀಡಿದ ಉಳ್ಳಾಲ ಠಾಣಾ ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.

Also Read  ಹುಬ್ಬಳ್ಳಿಗೆ ಆಗಮಿಸಿದ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಜಗದೀಶ್ ಶೆಟ್ಟರ್..!

error: Content is protected !!
Scroll to Top