ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಿಂದ ಮರ ಲೂಟಿ ಪ್ರಕರಣ ➤ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ವಾರದ ಗಡುವು ನೀಡಿದ ನೀತಿ ತಂಡ ➤ ತಪ್ಪಿದ್ದಲ್ಲಿ ಕಡಬ ಠಾಣೆಯ ಮುಂಭಾಗ ಉಗ್ರ ಪ್ರತಿಭಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.10. ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಿಂದ ಮರ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದಾತನ ಮನೆಗೆ ತಡ ರಾತ್ರಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಬ್ಬಾಳಿಕೆ ನಡೆಸಿದ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಒಂದು ವಾರದ ಒಳಗೆ ಪ್ರಕರಣ ದಾಖಲಿಸದಿದ್ದರೆ ಕಡಬ ಠಾಣೆಯ ಎದುರು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಟಿ. ಎಚ್ಚರಿಸಿದ್ದಾರೆ.

ಬುಧವಾರದಂದು ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ರಮ ಮರುಳುಗಾರಿಕೆ ಹಾಗೂ ಮರಗಳ್ಳತನದ ಆರೋಪ ಕೇಳಿಬಂದಿರುವ ಸ್ಥಳೀಯ ಅಬ್ಬಾಸ್ ಹಾಗೂ ಅರಣ್ಯ ಸಂಚಾರಿದಳದ ಮುಖ್ಯಸ್ಥೆ ಸಂಧ್ಯಾ ಅವರು ಹಾಗೂ ಪೊಲೀಸರು ಪ್ರಸಾದ್ ಅವರ ಮನೆಗೆ ನುಗ್ಗಿ ದಾಂಧಲೆ ನಡೆಸಿ ಮಹಿಳೆಯರ ಮೇಲೆ ದರ್ಪ ನಡೆಸಿರುವುದರ
ವಿರುದ್ಧ ಪ್ರಕರಣ ದಾಖಲಿಸದೆ ಅನ್ಯಾಯವೆಸಗಲಾಗುತ್ತಿದೆ ಎಂದು ಆರೋಪಿಸಿದರು. ಕ್ರೌರ್ಯ ಮೆರೆದಿರುವ ಅಧಿಕಾರಿಗಳು ದೂರುದಾರನ ಮೇಲೆ ಸೇಡು ತೀರಿಸಿಕೊಂಡಿರುವುದು ಸ್ಪಷ್ಟವಾಗುತ್ತಿದೆ, ದೂರುದಾರ ಪ್ರಸಾದ್ ಅವರು ನೇರವಾಗಿ ಸರಕಾರಕ್ಕೆ ದೂರು ನೀಡಿರುವುದು ಅಧಿಕಾರಿಗಳ ಬುಡಕ್ಕೆ ಬಂದು ನಿಂತಿದೆ, ಇದರಿಂದ ಪಾರಾಗಲು ಈಗ ಪ್ರಸಾದ್ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಮನೆಯವರಿಗೆ
ಕಿರುಕುಳ ನೀಡಲಾಗುತ್ತಿದೆ, ದಾಳಿ ನಡೆದ ದಿನ
ಮರಳು ಮಾಫಿಯಾದ ಅಬ್ಬಾಸ್‍ ಎಂಬಾತ ಹಾಗೂ ಇತರರ ಸಹಕಾರದೊಂದಿಗೆ ಎರಡು ಪಿಕ್ ಅಪ್‍ನಲ್ಲಿ ಹೊರಗಡೆಯಿಂದ ಮರಗಳನ್ನು ತಂದು, ಮನೆಯಲ್ಲಿದ್ದ ಮೂವತ್ತು ವರ್ಷಗಳ ಹಳೆಯ ಮರದ ಹಲಗೆಯನ್ನು ಹೊತ್ತೊಯ್ದು 79 ಕ್ಕೂ ಹೆಚ್ಚು ಮರ ಲೂಟಿ ಮಾಡಲಾಗಿದೆ ಎಂದು ಪ್ರಸಾದ್ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದೊಂದು ವ್ಯವಸ್ಥಿತವಾದ ಷಡ್ಯಂತ್ರವಾಗಿದ್ದು ಇಲ್ಲಿ ದಬ್ಬಾಳಿಕೆ ನಡೆಸಿದ ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯ ಅಬ್ಬಾಸ್ ಹಾಗೂ ಇತರರನ್ನು ಸರಕಾರವೇ ರಕ್ಷಿಸುತ್ತಿದೆ.

Also Read  ಸಿ' ಫೋರ್ ಚುನಾವಣಾ ಪೂರ್ವ ಸಮೀಕ್ಷೆ ► ಮುಂಬರುವ ಚುನಾವಣೆಯಲ್ಲಿ ಈ ಪಕ್ಷ ಬಹುಮತದಿಂದ ಅಧಿಕಾರ ಹಿಡಿಯಲಿದೆಯಂತೆ

ಯಾಕೆಂದರೆ ಸಂಧ್ಯಾ ಅವರ ಪತಿ ಒಬ್ಬರು ಬಿಜೆಪಿಯ ಮುಖಂಡರಾಗಿದ್ದಾರೆ. ಇದೇ ಕಾರಣಕ್ಕೆ ಪೋಲಿಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ದಾಳಿ ನಡೆಸಿದ ಮರುದಿನ ಸಂಚಾರಿ ದಳದ ಮುಖ್ಯಸ್ಥೆ ಸಂಧ್ಯಾ ಅವರು ಸ್ಥಳೀಯ ಮಹಿಳೆಯೊಬ್ಬರಿಗೆ
ಎರಡು ಸಾವಿರ ರೂ. ಲಂಚ ನೀಡಿ ಕಾಗದ ಪತ್ರಕ್ಕೆ ಸಹಿ
ಪಡೆದುಕೊಂಡಿರುವ ದಾಖಲೆ ನಮ್ಮಲ್ಲಿದೆ, ಇಂತಹ ಭ್ರಷ್ಟ ಅಧಿಕಾರಿಗಳು ಮರಳು ಮಾಫಿಯಾದವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು, ಸ್ಥಳೀಯ ಶಾಸಕರು ಈಗಿನ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಜಯನ್ ಅವರು ತಕ್ಷಣ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರಗಿಸಬೇಕು. ತಪ್ಪಿದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು.

Also Read  ಅನ್ಯಕೋಮಿನ ಜೋಡಿಯ ವಿವಾಹ ಪ್ರಕರಣ ➤ ಯುವತಿಯ ಮನವೊಲಿಸಲು ಮನೆಗೆ ಭೇಟಿ ನೀಡಿದ ಸ್ವಾಮೀಜಿಯ ವಿಫಲಯತ್ನ..!

ಪತ್ರಿಕಾಗೋಷ್ಠಿಯಲ್ಲಿ ನೀತಿ ತಂಡದ ಜಿಲ್ಲಾಧ್ಯಕ್ಷ ಜೋಸ್ ತೋಮಸ್, ಕಡಬ ತಾಲೂಕು ಅಧ್ಯಕ್ಷ ರಂಜಿತ್ ಕಳಾರ, ದೂರುದಾರ ಪ್ರಸಾದ್, ದೀಕ್ಷಿತಾ ಪ್ರಸಾದ್ ಉಪಸ್ಥಿತರಿದ್ದರು.

 

 

error: Content is protected !!
Scroll to Top