ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನಾಳೆ (ಮಾ. 11) ಕೈಕಂಬದಲ್ಲಿ ಬ್ಯಾರಿಕೇಡ್ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಕೈಕಂಬ, ಮಾ. 10. ಇಲ್ಲಿನ ಮುಖ್ಯ ರಸ್ತೆ ಹಾಗೂ ವೃತ್ತದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಅವಘಡಗಳು ವಾಹನ ಸವಾರರ ಅತಿಯಾದ ವೇಗದ ಕಾರಣದಿಂದ ಸಂಭವಿಸುತ್ತಿದ್ದು, ಇದರಿಂದಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪಾದಚಾರಿಗಳಿಗೆ ಸಂಕಷ್ಟವನ್ನುಂಟು ಮಾಡಿದೆ.

ಇದನ್ನೆಲ್ಲ ಮನಗಂಡು ಅನನ್ಯ ಚೇತನ ಸಂಸ್ಥೆಯು ಊರಿನ ಮಹನೀಯರ ಸಹಕಾರದೊಂದಿಗೆ, ವಾಹನಗಳ ವೇಗ ನಿಯಂತ್ರಣಕ್ಕಾಗಿ ತಡೆ ಬೇಲಿಗಳನ್ನು ಅನುಷ್ಠಾನ ಮಾಡಲು ಮುಂದಾಗಿದೆ. ಇದಕ್ಕಾಗಿ ಬ್ಯಾರಿಕೇಡ್ ಅನ್ನು ಮಾ. 11 (ಗುರುವಾರ) ಪೂರ್ವಾಹ್ನ 10 ಕ್ಕೆ ಸರಿಯಾಗಿ ಆರಕ್ಷಕ ಠಾಣೆ ಕಡಬ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಕೈಕಂಬ ಗ್ರಾಮಸ್ಥರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ. ಈ‌ ಕಾರ್ಯಕ್ರಮಕ್ಕೆ ನಮ್ಮ ಗ್ರಾಮಸ್ಥರು ಹಾಜರಿದ್ದು,‌ ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Also Read  ಯಕ್ಷಗಾನದ ಹೆಸರಾಂತ ಭಾಗವತ ಬಲಿಪ ನಾರಾಯಣ ನಿಧನ !!

error: Content is protected !!
Scroll to Top