ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಮೃತ್ಯು ➤ ಮೀನು ಹಿಡಿಯಲು ತೆರಳಿದ್ದ ವೇಳೆ ದುರ್ಘಟನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.10. ಕುಮಾರಧಾರ ನದಿಗೆ ಮೀನು ಹಿಡಿಯಲು ಹೋಗಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಕಡಬ ತಾಲೂಕಿನ‌ ಕೊಯಿಲ‌ ಗ್ರಾಮದ ಕೊನೆಮಜಲು ಪರಪ್ಪು ಎಂಬಲ್ಲಿ ಮಂಗಳವಾರ ಅಪರಾಹ್ನ ನಡೆದಿದೆ.

ನಾಪತ್ತೆಯಾದ ಯುವಕನನ್ನು ಕೊಯಿಲ‌ ಗ್ರಾಮದ ಪರಪ್ಪು ನಿವಾಸಿ ಮಾಯಿಲ ಮುಗೇರ ಎಂಬವರ ಪುತ್ರ ಆನಂದ ಮುಗೇರ (26) ಎಂದು ಗುರುತಿಸಲಾಗಿದೆ. ಈತ ಕುಮಾರಧಾರ ನದಿಯ ಕೊನೆಮಜಲು‌ ಎಂಬಲ್ಲಿ ಬಲೆ ಬೀಸಿ ಮೀನು‌ ಹಿಡಿಯಲು ಮಂಗಳವಾರ ಮಧ್ಯಾಹ್ನದ ಬಳಿಕ ಮನೆಗೆ ಬಂದಿದ್ದ ಸಂಬಂಧಿಕ ಬಾಲಕನನ್ನು ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಬಾಲಕನನ್ನು ನದಿ ದಡದಲ್ಲಿ‌ ಬಿಟ್ಟು ನದಿಯ ಇನ್ನೊಂದು ಭಾಗದ ಆಳವಾದ ನೀರು ಇರುವ ಜಾಗದಲ್ಲಿ ಬಲೆ ಬೀಸಿ ವಾಪಾಸ್ಸಾಗುವಾಗ ಸುಸ್ತಾಗಿ ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಡಬ ಪೋಲೀಸರು ಮಂಗಳವಾರ ರಾತ್ರಿಯವರೆಗೆ ಹುಡುಕಾಡಿ ವಾಪಾಸ್ಸಾಗಿದ್ದರು. ಇಂದು ಬೆಳಗ್ಗಿನಿಂದ ಮುಳುಗು ತಜ್ಞರನ್ನು ಕರೆಸಿ ನದಿಯಲ್ಲಿ ಹುಡಿಕಾಡಿದಾಗ ಮೃತದೇಹ‌ ಪತ್ತೆಯಾಗಿದೆ.

Also Read  ವಿಟ್ಲ: ಮದುಮಗನಿಂದ ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ ➤ ಇಬ್ಬರ ಬಂಧನ, ಪ್ರಮುಖ ಆರೋಪಿ ಮದುಮಗ ನಾಪತ್ತೆ

 

 

error: Content is protected !!
Scroll to Top