ಕೊಕ್ಕಡ: ಮರ ಕಡಿಯುತ್ತಿದ್ದ ವೇಳೆ ಅವಘಡ ➤ ಮೂವರ ದುರ್ಮರಣ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 09. ಮನೆ ಸಮೀಪ ಮರ ತುಂಡರಿಸುತ್ತಿದ್ದ ವೇಳೆ ಮರ ಬಿದ್ದ ಪರಿಣಾಮ ಮೂವರು ಮೃತಪಟ್ಟ ಘಟನೆ ಬೆಳ್ತಂಗಡಿಯ ಪಟ್ರಮೆ ಎಂಬಲ್ಲಿ ನಡೆದಿದೆ.


ಮೃತಪಟ್ಟವರನ್ನು ಪಟ್ರಮೆ ರಾಮಣ್ಣ ಕುಂಬಾರ ಅವರ ಪುತ್ರ ಪ್ರಶಾಂತ್ (21 ವ), ಸೇಸಪ್ಪ ಪೂಜಾರಿ ಅವರ ಪುತ್ರ ಸ್ವಸ್ತಿಕ್ (23 ವ) ಹಾಗೂ ಉಪ್ಪಿನಂಗಡಿಯ ಗಣೇಶ್ (38 ವ) ಎಂದು ಗುರುತಿಸಲಾಗಿದೆ. ಪಟ್ರಮೆ ಗ್ರಾಮದ ಅನಾರು ಬಳಿ ಕಾಯಿಲ ಸಮೀಪ ಇಂದು ಮಧ್ಯಾಹ್ನ ಧೂಪದ ಮರವೊಂದನ್ನು ಕಡಿಯುತ್ತಿದ್ದ ವೇಳೆ ಮರದ ಅಡಿಗೆ ಸಿಲುಕಿ ಮೂವರು ಯುವಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಕಲ್ಲಡ್ಕ: ಹಣಕಾಸಿನ ವಿಚಾರದಲ್ಲಿ ಯುವಕರಿಬ್ಬರ ನಡುವೆ ಗಲಾಟೆ ► ಕಲ್ಲಡ್ಕದಲ್ಲಿ ಗಲಭೆಯೆಂದು ವಾಟ್ಸ್ಅಪ್ ನಲ್ಲಿ ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳು

error: Content is protected !!
Scroll to Top