ಎಡಮಂಗಲ ದಲಿತ ಮಹಿಳೆಯ ಮನೆ ಧ್ವಂಸ ಪ್ರಕರಣ ➤ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು- ಸಚಿವ ಎಸ್‌.ಅಂಗಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ಎಡಮಂಗಲದ ದಲಿತ ಮಹಿಳೆಯೋರ್ವರ ಮನೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಸೂಚಿಸುವುದಾಗಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಬೆಂಗಳೂರಿನ ಮೊಗೇರ ಕ್ಷೇಮಾಭಿವೃದ್ದಿ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ್ ಅವರು ಸಚಿವರನ್ನು ಸೋಮವಾರದಂದು ಭೇಟಿಯಾಗಿ ಘಟನೆಯನ್ನು ಪ್ರಸ್ತಾಪಿಸಿದ ವೇಳೆ ಮಾತನಾಡಿದ ಸಚಿವರು ಈ ಘಟನೆಯ ನಿಜಾಂಶ ಏನೆಂಬುದನ್ನು ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ತನಿಖೆ ಮಾಡಬೇಕು ಮತ್ತು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

Also Read  ಉಡುಪಿ :ಹಾಡಹಗಲೇ ಬಸ್ ಮಾಲಕನಿಗೆ ತಲವಾರು ತೋರಿಸಿ ಬೆದರಿಕೆ.!

error: Content is protected !!
Scroll to Top