ಮಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ವಶಕ್ಕೊಳಗಾದ ಸರ್ವೇಯರ್ ಜಾಮೀನು ಅರ್ಜಿ ವಜಾ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 09. ಲಂಚ ಪಡೆದು ಸಿಕ್ಕಿಬಿದ್ದ ಮಂಗಳೂರು ತಾಲೂಕು ಕಚೇರಿಯ ಸರ್ವೆಯರ್ ಗಂಗಾಧರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇದೀಗ ಕೋರ್ಟ್ ವಜಾಗೊಳಿಸಿದೆ.‌

ಮರ ಕಡಿಯುವ ವಿಚಾರಕ್ಕೆ ಸಂಬಂಧಿಸಿ ಜಾಗವನ್ನು ಅಳತೆ ಮಾಡಿ ನಕಾಶೆಯನ್ನು ನೀಡಲು ಉಳ್ಳಾಲದ ಸೊಹೈಲ್ ಎಂಬವರಿಂದ 30,000 ರೂ. ಲಂಚದ ಬೇಡಿಕೆ ಇಟ್ಟಿದ್ದು, ಬಳಿಕ ಮಾತುಕತೆ ನಡೆದು ರೂ. 20 ಸಾವಿರಕ್ಕೆ ಒಪ್ಪಿ 3,500 ರೂ. ಮುಂಗಡ ಪಡೆದಿದ್ದ. ಈ ವೇಳೆ ಸುಹೈಲ್ ರವರು ಎಸಿಬಿಗೆ ತಿಳಿಸಿದ್ದು ಉಳಿಕೆ ಹಣ ರೂ. 16,500 ಸ್ವೀಕರಿಸುತ್ತಿದ್ದಾಗ ಕಳೆದ ಫೆ.23ರಂದು ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂದಿಸಿದ್ದರು. ಆರೋಪಿ ಗಂಗಾಧರ್ ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಬಿ.ಬಿ. ಜಕಾತಿ, ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.

Also Read  ಭಾರೀ ಮಳೆಗೆ ಮನೆಯ ಛಾವಣಿ ಕುಸಿತ ➤ ಐವರು ಮಹಿಳೆಯರು ಮೃತ್ಯು

error: Content is protected !!
Scroll to Top