ಉಪ್ಪಿನಂಗಡಿ ಠಾಣಾ ಎಸ್ಐ ಡಿ.ಎನ್.ಈರಯ್ಯ ವರ್ಗಾವಣೆ ➤ ರಾಜಕೀಯ ಒತ್ತಡಕ್ಕೆ ಬಲಿಯಾದರೇ ಖಡಕ್ ಅಧಿಕಾರಿ..⁉️

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.09. ಖಡಕ್ ಎಸ್ಐ ಎಂದೇ ಚಿರಪರಿಚಿತರಾಗಿದ್ದ ಉಪ್ಪಿನಂಗಡಿ ಠಾಣಾ ಎಸ್ಐ ಡಿ.ಎನ್. ಈರಯ್ಯ ಅವರನ್ನು ವರ್ಗಾವಣೆಗೊಳಿಸಲಾಗಿದ್ದು, ಆ ಸ್ಥಾನಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆಯ ಪಿ.ಎಸ್.ಐ ಕುಮಾರ್ ಸಿ.ಕಾಂಬ್ಳೆಯವರನ್ನು ನಿಯುಕ್ತಿಗೊಳಿಸಿ ಪಶ್ಚಿಮ ವಲಯ ಮಹಾನಿರೀಕ್ಷಕರು ಆದೇಶ ಹೊರಡಿಸಿದ್ದಾರೆ.

ಈರಯ್ಯರವರಿಗೆ ಯಾವುದೇ ನಿರ್ದಿಷ್ಟ ಸ್ಥಳ ತೋರಿಸದೆ ಇರುವುದು ಇದೀಗ ಅನುಮಾನಕ್ಕೆ ಕಾರಣವಾಗಿದೆ. ಅಕ್ರಮ ನಡೆಸುವವರಿಗೆ ಸಿಂಹಸ್ವಪ್ನವಾಗಿದ್ದ ಈರಯ್ಯ ಉಪ್ಪಿನಂಗಡಿಯಲ್ಲಿ ಯಾರನ್ನೂ ಕ್ಯಾರೇ ಅನ್ನುತ್ತಿರಲಿಲ್ಲ. ತನ್ನ ಖಡಕ್ ಕಾರ್ಯವೈಖರಿಯೇ ಅವರಿಗೆ ಮುಳುವಾಗಿದೆಯಾ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಹಿಂದಿನಿಂದಲೇ ಅವರನ್ನು ವರ್ಗಾಯಿಸಲು ಕಾಣದ ಕೈ ಕೆಲಸ‌ ಮಾಡುತ್ತಿದ್ದುದು ಗುಟ್ಟಾಗಿ ಉಳಿದಿರಲಿಲ್ಲ. ಕೊನೆಗೂ ಇದೀಗ ರಾಜಕೀಯ ಫುಡಾರಿಗಳ ಒತ್ತಡಕ್ಕೆ ಖಡಕ್ ಅಧಿಕಾರಿ ಬಲಿಯಾದರು ಎಂಬ ಸುದ್ದಿ ಹರಿದಾಡತೊಡಗಿದೆ.

 

Also Read  PU ಇಂಗ್ಲಿಷ್ ಪರೀಕ್ಷೆ ➤ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಪುನರಪಿ ತರಗತಿಗೆ ಸೂಚನೆ

 

error: Content is protected !!
Scroll to Top