‘ಹೆಡ್ ಶಾಟ್’ ಮೆನ್ಸ್ ಪಾರ್ಲರ್ ಶುಭಾರಂಭ ➤ ಹೇರ್ ಕಟ್ಟಿಂಗ್ ಮಾಡಿಸಿ, ಕ್ಯಾಶ್ ಬ್ಯಾಕ್ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಮಾ.06. ಯುವ ಜನತೆ ಸ್ವ ಉದ್ಯೋಗ ಮಾಡುವುದರಿಂದ ಆರ್ಥಿಕವಾಗಿ ಸದೃಢವಾಗಬಲ್ಲರು. ಯಾವುದೇ ಕ್ಲಿಷ್ಟಕರ ಸಂದರ್ಭದಲ್ಲಿಯೂ ಎದೆಗುಂದದೆ ಮುನ್ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ಎನ್.ಕೆ. ಹೇಳಿದರು.

ಅವರು ಕಡಬದ ಪಂಜ ರಸ್ತೆಯ ಯೋಗಕ್ಷೇಮ ಸಂಕೀರ್ಣದಲ್ಲಿ ಶುಭಾರಂಭಗೊಂಡ ‘ಹೆಡ್ ಶಾಟ್’ ಸುಸಜ್ಜಿತ ಮೆನ್ಸ್ ಪಾರ್ಲರನ್ನು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಶ್ರೀಹರಿ ಸ್ವೀಟ್ಸ್ ನ ಕಿಶನ್ ಕುಮಾರ್, ಹರಿಪ್ರಸಾದ್ ರೈ ಬೆದ್ರಾಜೆ ಮೊದಲಾದವರು ಉಪಸ್ಥಿತರಿದ್ದರು. ಹೆಡ್ ಶಾಟ್ ಪ್ರೊಫೆಷನಲ್ ಮೆನ್ಸ್ ಪಾರ್ಲರ್ ನಲ್ಲಿ ಹೇರ್ ಕಟ್ಟಿಂಗ್, ಶೇವಿಂಗ್, ಹೇರ್ ಕಲರಿಂಗ್, ಹೇರ್ ಸ್ಟ್ರೈಟನಿಂಗ್, ಆಯಿಲ್‌ ಮಸಾಜ್, ಹೇರ್ ಕೇರ್ ಟ್ರೀಟ್ ಮೆಂಟ್, ಸ್ಕಿನ್ ಕೇರ್ ಟ್ರೀಟ್ ಮೆಂಟ್, ಫೇಷಿಯಲ್, ಸೇರಿದಂತೆ ಹಲವು ಸೇವೆಗಳು ಲಭ್ಯವಿದ್ದು, ಮದುವೆ ಗಂಡಿಗಾಗಿ ‘ಗ್ರೂಮ್ ಪ್ಯಾಕೇಜ್’ ಹೆಸರಿನ ವಿಶೇಷ ಪ್ಯಾಕೇಜನ್ನು ಪರಿಚಯಿಸಲಾಗಿದೆ. ಅಲ್ಲದೇ ಆಯ್ದ 10 ಗ್ರಾಹಕರಿಗೆ ರೂ. 300 ರ ಕ್ಯಾಶ್ ಬ್ಯಾಕ್ ವೋಚರ್ ನೀಡಲಾಗಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಬುಕ್ಕಿಂಗ್ ಗಾಗಿ 7676 093 732 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಗಾಂಜಾ ಪ್ರಕರಣ- 4 ಮಂದಿ ಸೆರೆ

 

error: Content is protected !!
Scroll to Top