ಬಂಟ್ವಾಳ: ನಾಪತ್ತೆಯಾಗಿದ್ದ ವ್ಯಕ್ತಿ ಸುಬ್ರಹ್ಮಣ್ಯದಲ್ಲಿ ಪತ್ತೆ..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 07. ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪಂಜಿಕಲ್ಲು ಗ್ರಾಮದ ಕೇಲ್ದೋಡಿ‌ ಮನೆ ನಿವಾಸಿ ಕೇಶವ ಪೂಜಾರಿ(36) ಅವರು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪತ್ತೆಯಾಗಿದ್ದು, ಮಾ.‌07ರಂದು ಮನೆಗೆ ಮರಳಿದ್ದಾರೆ.

ಕೇಶವ ಪೂಜಾರಿ ಅವರು ಜ. 03. ರಂದು ಮದುವೆಗೆಂದು ಹೇಳಿ ಹೋದವರು ಹಿಂತಿರುಗಿ ಬಂದಿರಲಿಲ್ಲ. ಅವರು ಈ ಹಿಂದೆಯೂ ಇದೇ ರೀತಿ 2-3 ಬಾರಿ ಮನೆ ಬಿಟ್ಟು ಹೋಗಿ ಬಳಿಕ ಮನೆಗೆ ಮರಳಿದ್ದರು. ಹೀಗಾಗಿ ಅವರ ಪತ್ನಿ ಯಶೋಧಾ ಅವರು ತಡವಾಗಿ ದೂರು ನೀಡಿದ್ದರು. ಇವರನ್ನು ಹುಡುಕಿದ ಮನೆಯವರು ಹಾಗೂ ಊರಿನವರು ಮಾ. 01ರ ಕೇಲ್ದೋಡಿ ಜಾತ್ರೆಯ ಸಂದರ್ಭದಲ್ಲಿ ವೈದ್ಯನಾಥ ದೈವದ ಬಳಿ ಪ್ರಾರ್ಥನೆ ಮಾಡಿಸಿದ್ದು, 12 ದಿನಗಳಲ್ಲಿ ಹುಡುಕಿ ಕೊಡುವ ಕುರಿತು ದೈವ ಮಾತುಕೊಟ್ಟಿತ್ತು. ಅಚ್ಚರಿ ಎಂಬಂತೆ ಏಳೇ ದಿನಗಳಲ್ಲಿ ಕೇಶವ ಪೂಜಾರಿ ಅವರು ಪತ್ತೆಯಾಗಿದ್ದಾರೆ.

Also Read  ವಿಟ್ಲ: ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆ..!! ➤ ಕೊಲೆ ಅಥವಾ ಅಪಘಾತ ಶಂಕೆ

error: Content is protected !!
Scroll to Top