ಕಡಬ: ಮುಸ್ಲಿಂ ಧರ್ಮದ ಅವಹೇಳನ ಪ್ರಕರಣ ► ಆರೋಪಿಯ ಬಂಧನಕ್ಕೆ ಭಾನುವಾರ ಮಧ್ಯಾಹ್ನದ ಗಡುವು

(ನ್ಯೂಸ್ ಕಡಬ) newskadaba.com ಕಡಬ, ಅ.21. ಮುಸ್ಲಿಮರ ಪವಿತ್ರ ಸ್ಥಳವಾದ ಮಕ್ಕಾದ ಮಸೀದಿಯ ಮೇಲೆ ಹನುಮಂತನ ಭಾವಚಿತ್ರವನ್ನಿರಿಸಿ ಮುಸ್ಲಿಂ ಧರ್ಮವನ್ನು ಅವಹೇಳನ ನಡೆಸಲಾಗಿದೆಯೆಂದು ಆರೋಪಿಸಿ ಕಡಬದ ಪಂಚಾಯತ್ ಬಿಲ್ಡಿಂಗ್ ನಲ್ಲಿರುವ ಗಣೇಶ್ ಮೊಬೈಲ್ ಸೆಂಟರ್‌ನ ನೌಕರ ಪ್ರದೀಪ್ ಎಂಬವರ ಮೇಲೆ ಕಡಬದ ವಿವಿಧ ಮುಸ್ಲಿಂ ಸಂಘಟನೆಗಳ ವತಿಯಿಂದ ಕಡಬ ಪೊಲೀಸ್‌ ಠಾಣೆಗೆ ದೂರು ನೀಡಲಾಯಿತು.

ಕಡಬ ಪರಿಸರದ ಎಲ್ಲಾ ಮಸೀದಿಗಳು, ಎಸ್ಕೆಎಸ್ಸೆಸ್ಸೆಫ್, ಎಸ್ಸೆಸ್ಸೆಫ್, ಪಿಎಫ್ಐ ಕಡಬ ವಲಯ ಮೊದಲಾದವುಗಳಿಂದ ಹಲವು ದೂರುಗಳನ್ನು ನೀಡಲಾಯಿತು.

ಪ್ರದೀಪ್ ಕಾಬಾದ ಫೊಟೋವನ್ನು ತಿರುಚಿ ತನ್ನ 9741469893 ಸಂಖ್ಯೆಯ ವಾಟ್ಸಪ್ ಪ್ರೊಫೈಲ್ ಫೊಟೊವನ್ನಾಗಿ ಉಪಯೋಗಿಸಿ ಮಕ್ಕಾವನ್ನು ಅವಮಾನಿಸುವ ಕೃತ್ಯವನ್ನು ಮಾಡಿದ್ದಲ್ಲದೆ ಮುಸ್ಲಿಮರ ಭಾವನೆಯನ್ನು ಕೆರಳಿಸುವಂತಹ ಹೀನಕೃತ್ಯವನ್ನು ಎಸಗಲಾಗಿದೆ. ಈತನನ್ನು ಬಂಧಿಸಬೇಕೆಂದು ಬಂಧಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಥಳೀಯ ಮುಸ್ಲಿಂ ಸಂಘಟನೆಯವರು ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ್ದರು.

Also Read  ದಕ್ಷಿಣ ಕನ್ನಡ: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತ್ಯು

ಕೊನೆಗೆ ಪೊಲೀಸ್ ಅಧಿಕಾರಿಗಳು ಮನವೊಲಿಸಿದ ಕಾರಣ ಅಕ್ಟೋಬರ್ 22 ಭಾನುವಾರ ಮಧ್ಯಾಹ್ನದ ಒಳಗೆ ಬಂಧಿಸದಿದ್ದಲ್ಲಿ 2 ಗಂಟೆಗೆ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್, ಕಡಬ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ ಆರೋಪಿಯನ್ನು ಬಂಧಿಸಲಾಗುವುದೆಂದು ಭರವಸೆ ನೀಡಿದರು.

error: Content is protected !!
Scroll to Top