ಪೇರಡ್ಕ ಮಖಾಂ ಉರೂಸ್ ಧಾರ್ಮಿಕ ಕಾರ್ಯಕ್ರಮ ➤ ದಾಂಪತ್ಯ ಜೀವನವೇ ಕುಟುಂಬದ ಅಡಿಪಾಯ- ಯಹ್ಯಾ ಬಾಖವಿ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 07. ವೈವಾಹಿಕ ಜೀವನದಲ್ಲಿ ಸಂತೋಷದಲ್ಲೇ ಮನುಷ್ಯನ ಮನಸ್ಸು ಶಾಂತವಾಗಿ ಸಕಾರಾತ್ಮಕ ಚಿಂತನೆಯಿಂದ ಬದುಕಲು ಸಾಧ್ಯ. ವೈವಾಹಿಕ ಜೀವನದ ನಂತರ ಕುಟುಂಬ ಕಲಹಕ್ಕೆ ಆಸ್ಪದ ಕೊಡಲೇಬಾರದು. ಆದರೆ ಕುಟುಂಬ ಜೀವನದ ಅಡಿಪಾಯವೇ ವೈವಾಹಿಕ ಜೀವನ ಎಂದು ಕೇರಳದ ಪ್ರಖ್ಯಾತ ವಾಗ್ಮಿ ಬಹು। ಯಹ್ಯಾ ಬಾಖವಿ ಪುಝಕ್ಕರ ಹೇಳಿದರು.

ಅವರು ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫಿನ ಉರೂಸ್ ಕಾರ್ಯಕ್ರಮದ 2ನೇ ದಿನದಲ್ಲಿ ಮುಖ್ಯ ಪ್ರಭಾಷಣವನ್ನು ಮಾಡಿದರು. ಕಾರ್ಯಕ್ರಮವನ್ನು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಅಲ್ ಹಾಜ್ ಇಸಾಖ್ ಬಾಖವಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೇರಡ್ಕ ಮುಹಿಯುದ್ದೀನ್ ಜುಮ್ಮಾಮಸೀದಿ ಅಧ್ಯಕ್ಷ ಎಸ್ ಅಲಿ ಹಾಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೇರಡ್ಕ ಮಸೀದಿ ಖತೀಬರಾದ ಸುಹೈಲ್ ದಾರಿಮಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್, ಸಜ್ಕನ ಪ್ರತಿಷ್ಠಾನ ಬೀಜದಕಟ್ಟೆ ಅಧ್ಯಕ್ಷ ಉಮ್ಮರ್ ಬೀಜದ ಕಟ್ಟೆ, ಸುಳ್ಯ ತಾಲೂಕು ಮದರಸ ಮ್ಯಾನೇಜ್‌ಮೆಂಟ್‌ ಅಧ್ಯಕ್ಷ ತಾಜ್ ಮಹಮ್ಮದ್, ಟಿ.ಎಮ್.ಬಾಬ ಹಾಜಿ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಎಸ್.ಕೆ.ಹನೀಫ್, ಅರಂತೋಡು ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ಪೇರಡ್ಕ ಜಮಾಅತ್ ಉಪಾಧ್ಯಕ್ಷ ಸಾಜಿದ್ ಅಝ್ಝರಿ, ಮುನೀರ್ ದಾರಿಮಿ, ಪೇರಡ್ಕ ಜಮಾಅತ್ ಕಾರ್ಯದರ್ಶಿ ಹಾಜಿ ರಝಾಕ್, ಇಬ್ರಾಹಿಂ ಮೈಲ್ ಕಲ್ಲು, ಇಬ್ರಾಹಿಂ ಶೇಟ್ಟಿಯಡ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Also Read  ಜನಜೀವನಕ್ಕೆ ತೊಂದರೆಯಾಗದ ರೀತಿ ಹೊಸವರ್ಷಕ್ಕೆ ಮಾರ್ಗಸೂಚಿ ➤ ಸಿಎಂ ಬೊಮ್ಮಾಯಿ

error: Content is protected !!
Scroll to Top