ಕಣ್ಣೂರು: ಸ್ಟೀಲ್ ಬಾಂಬ್ ಪತ್ತೆ

(ನ್ಯೂಸ್ ಕಡಬ) newskadaba.com ಕೇರಳ, ಮಾ. 07. ತಲಶ್ಶೇರಿ ಪೊಲೀಸರು ಹಾಗೂ ಬಾಂಬ್‍ ಸ್ಕ್ವಾಡ್ ಜಂಟಿಯಾಗಿ ನಡೆಸಿದ ಆಯುಧ ತಪಾಸಣೆಯ ವೇಳೆ ಸ್ಟೀಲ್ ಬಾಂಬೊಂದು ತಲಶ್ಯೇರಿ ಠಾಣಾ ವ್ಯಾಪ್ತಿಯ ಉಕಂಡನ್ ಪೀಡಿಗ ಸಮೀಪ ಪಿಪಿ ಅನಂತನ್ ರಸ್ತೆಯ ಅಯ್ಯತ್ತಾನ್ ಎಂಬಲ್ಲಿ ಪತ್ತೆಯಾಗಿದೆ.

ಈ ಸಂದರ್ಭದಲ್ಲಿ ಬಾಂಬ್ ತಯಾರಿಸಲು ಬಳಸುವ 13 ಸ್ಟೀಲ್ ಕಂಟೈನರ್ ಹಾಗೂ ಸಿಡಿಮದ್ದು ಪತ್ತೆಯಾಗಿದೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ತಲಶ್ಶೇರಿ ಇನ್ಸ್‌ಪೆಕ್ಟರ್ ಗೋಪಕುಮಾರ್ ನೇತೃತ್ವದಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಶ್ರಫ್ ಹಾಗೂ ಬಾಂಬ್ ಪತ್ತೆದಳದ ಸದಸ್ಯರು ಆಯುಧ ತಪಾಸಣೆಯಲ್ಲಿ ಭಾಗವಹಿಸಿದ್ದರು.

Also Read  ಪಡುಬಿದ್ರಿ: ಗಂಡನಿಂದ ಮಾನಸಿಕ, ದೈಹಿಕ ಹಿಂಸೆ ➤ ಗೃಹಿಣಿ ಆತ್ಮಹತ್ಯೆ..!

error: Content is protected !!
Scroll to Top