ವಿದ್ಯಾರ್ಥಿ ವೇತನ ವಂಚಿತ ವಿದ್ಯಾರ್ಥಿಗಳ ನ್ಯಾಯಕ್ಕಾಗಿ NSUI ಸುಳ್ಯ ಅಭಿಯಾನ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 07. 2019-20ನೇ ಸಾಲಿನ ವಿದ್ಯಾರ್ಥಿ ವೇತನ ವಂಚಿತ ವಿದ್ಯಾರ್ಥಿಗಳ ವಿಶೇಷ ಗಣತಿಯನ್ನು ಮಾಡಿ ವಿದ್ಯಾರ್ಥಿ ಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ NSUI ಸುಳ್ಯ ಅಭಿಯಾನ ಕೈಗೊಂಡಿದೆ.

ವಿದ್ಯಾರ್ಥಿ ವೇತನ ದೊರೆಯದ ವಿದ್ಯಾರ್ಥಿ ಈ ಸರ್ವೆಯಲ್ಲಿ ಬಾಗವಹಿಸಿ ತಮ್ಮ ಮಾಹಿತಿಯನ್ನು ನೋಂದಾವಣೆ ಮಾಡಲು ಕೋರಲಾಗಿದೆ. ಈ ಎಲ್ಲಾ ಮಾಹಿತಿಯನ್ನು NSUI ಆಯಾ ಇಲಾಖೆಗಳಿಗೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಲಿದೆ. ಈ ಅಭಿಯಾನದ ZOOM ಮೀಟಿಂಗ್ ನಲ್ಲಿ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಚಾಲನೆ ನೀಡಿದರು. ಈ ವೇಳೆ ಸುಳ್ಯ NSUI ಮುಖಂಡರುಗಳಾದ ಕೀರ್ತನ್ ಗೌಡ ಕೊಡಪಾಲ, ಆಶಿಕ್ ಅರಂತೋಡ್, ಆಸಿಫ್‌ ಬಾಳಿಲ, ಧನುಷ್ ಕುಕ್ಕೆಟ್ಟಿ, ದರ್ಶನ್, ರಕ್ಷಿತ್, ಶಹಾಲ್, ಯಶವಂತ್, ಪವನ ಅಂಬೆಕಲ್ಲು, ಭರತ್ ಅಡ್ಯಡ್ಕ, ಸುಜಿತ್, ಮಿಥುನ್ ಸುಳ್ಯ, ಮೋಹನ್ ಹಾಗು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Also Read  ಹಿರಿಯ ಪತ್ರಕರ್ತ ಪ್ರಸಾದ್ ಹೆಗಡೆ ವಿಧಿವಶ

error: Content is protected !!
Scroll to Top