ಪೇರಡ್ಕ ಉರೂಸ್ ಪ್ರಯುಕ್ತ ಧಾರ್ಮಿಕ ಉಪನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಪೇರಡ್ಕ, ಮಾ. 06. ಯುವಕ ಯುವತಿಯರು ಸಮಾಜದಲ್ಲಿ ದಾರಿ ತಪ್ಪುತ್ತಿರುವುದು ಖೇದಕರ. ಇವತ್ತಿನ ಕಾಲಘಟ್ಟದಲ್ಲಿ ಯುವಕ ಮತ್ತು ಯುವತಿಯರು ಮಾದಕ ವ್ಯಸನಕ್ಕೆ ಆಕರ್ಷಣೆಯಾಗಿದೆ. ಯುವಕರು ಸಮಾಜವನ್ನು ಕಟ್ಟುವವರು ಆಗಬೇಕೇ ಹೊರತು ಸಮಾಜವನ್ನು ಹಾಳು ಮಾಡುವರು ಆಗಬಾರದು. ಮನುಷ್ಯನ ಜೀವನ ಅಲ್ಲೋಲ ಕಲ್ಲೋಲವಾಗಿದ್ದರೂ ದಿನಂಪ್ರತಿ ಉಪಯೋಗಿಸುವ ವಸ್ತ್ರಧಾರಣೆಯು ಫ್ಯಾಷನ್ ಆಗಿದೆ ಎಂದು ಅಬ್ದುಲ್ ಖಾದರ್ ದಾರಿಮಿ ವಳಚ್ಚಿಲ್ ಹೇಳಿದರು.

ಅವರು ಮಾರ್ಚ್‌ 5 ರಂದು ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೇರಡ್ಕ ಮುಹಿಯ್ಯುದ್ದಿನ್ ಜುಮ್ಮಾಮಸೀದಿ ಅಧ್ಯಕ್ಷರಾದ ಎಸ್.ಅಲಿ ಹಾಜಿ ವಹಿಸಿದರು. ಸ್ಥಳೀಯ ಜಮಾಅತ್ ಖತೀಬರಾದ ಬಹು ಸುಹೇಲ್ ದಾರಿಮಿ ದುವಾ ನೆರವೇರಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಲ್ಲಿ ಮಹಾನ್ ವ್ಯಕ್ತಿಗಳು ಅಂತ್ಯ ವಿಶ್ರಾಂತಿಗೊಂಡಿರುವುದು ನಾಡಿನ ತೆಜಸ್ಸಾಗಿದೆ. ಅವುಲಿಯಾಕಳನ್ನು ನಾವು ಗೌರವಿಸಿ ನಾಡಿನಲ್ಲಿ ಸೌಹಾರ್ದತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಯಾಗಿ ಮಸೀದಿ ಗೌರವ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್, ಕಲ್ಲುಗುಂಡಿ ಮಸೀದಿ ಖತೀಬರಾದ ಬಹು ಅಬ್ದುಲ್ ಅಝೀಝ್ ಬಾಖವಿ, ಸಂಪಾಜೆ ಮಸೀದಿ ಖತೀಬರಾದ ಜಮಾಲುದ್ದೀನ್ ಅಮಾನಿ, ಎಮ್.ಜೆ.ಎಮ್ ಪೇರಡ್ಕ ಮಸೀದಿ ಉಪಾಧ್ಯಕ್ಷ ಸಾಜಿದ್ ಅಝ್ಝರಿ, ಹಯಾತುಲ್ ಇಸ್ಲಾಂ ಮದರಸ ಅಧ್ಯಾಪಕ ಹಾಜಿ ಝಾಕರಿಯಾ ದಾರಿಮಿ ಅರ್ಕಾನ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಅರಂತೋಡು ಜಮಾಅತ್ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ, ಟಿ.ಎಮ್.ಬಾಬಾ ಹಾಜಿ, ಮುನೀರ್ ದಾರಿಮಿ, ಜಮಾಅತ್ ಕಾರ್ಯದರ್ಶಿ ಹಾಜಿ ರಝಾಕ್, ಎಮ್.ಆರ್.ಡಿ.ಎ.ಅಧ್ಯಕ್ಷ ಜಾಕಿರ್ ಹುಸೈನ್, ಇಬ್ರಾಹಿಂ ಕರಾವಳಿ, ಇಬ್ರಾಹಿಂ ಶೆಟ್ಟಿಯಡ್ಕ, ಪಾಂಡಿ ಅಬ್ಬಾಸ್, ಹಸೈನಾರ್ ಚಟ್ಟೆಕಲ್ಲು ಮೊದಲಾದವರು ಉಪಸ್ಥಿತರಿದ್ದರು. ಹಾಜಿ ಝಾಕರಿಯಾ ದಾರಿಮಿ ಸ್ವಾಗತಿಸಿ ಖಾದರ್ ಮೊಟ್ಟಂಗಾರ್ ವಂದಿಸಿದರು.

Also Read  ಕೊನೆಗೂ ದೀಪಕ್ ಕುಟುಂಬಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತ ► ರುದ್ರಭೂಮಿ ತಲುಪಿದ ದೀಪಕ್ ಮೃತದೇಹ

error: Content is protected !!
Scroll to Top