ಬಂಟ್ವಾಳ: ಮದ್ಯ ಸೇವಿಸಿ ಗಂಡ – ಹೆಂಡತಿಯ ನಡುವೆ ಜಗಳ ➤ ಪತ್ನಿಯ ಹೊಡೆತಕ್ಕೆ ಗಂಡ ಬಲಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 06. ಹೆಂಡತಿಯೇ ಸ್ವತಃ ಗಂಡನನ್ನು ಕೊಲೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ನಾವೂರ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರನ್ನು ನಾವೂರ ಗ್ರಾಮದ ಸೂರ ಕ್ವಾಟ್ರಸ್ ನಿವಾಸಿ ಸೇಸಪ್ಪ ಪೂಜಾರಿ (60) ಮೃತಪಟ್ಟ ವ್ಯಕ್ತಿ. ಕೊಲೆಗೈದವರನ್ನು ಸೇಸಪ್ಪರವರ ಪತ್ನಿ ಉಮಾವತಿ (52) ಅವರನ್ನು ವಶಕ್ಕೆ ಪಡೆಯಲಾಗಿದೆ. ಸೇಸಪ್ಪರವರು ಕೂಲಿ ಕೆಲಸ ಮಾಡುತ್ತಿದ್ದು, ಪ್ರತೀದಿನ ಮನೆಯಲ್ಲಿ ಗಂಡ- ಹೆಂಡತಿ ಮಧ್ಯೆ ಕುಡಿದು ಗಲಾಟೆ ನಡೆಯುತ್ತಿತ್ತು. ಮಾ.3 ರಂದು ರಾತ್ರಿ ಗಂಡ ಹೆಂಡತಿ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ಗಲಾಟೆ ಜೋರಾಗಿ ಹೊಡೆದಾಟದ ಹಂತಕ್ಕೆ ತಲುಪಿ ಹೆಂಡತಿಯು ಮನೆಯಲ್ಲಿದ್ದ ಕತ್ತಿಯಿಂದ ಗಂಡನಿಗೆ ಬಲವಾಗಿ ಹೊಡೆದಿದ್ದರು. ಇದರಿಂದ ಸೇಸಪ್ಪ ಅವರ ಹಣೆಗೆ ತೀವ್ರತರದ ಗಾಯಗಳಾಗಿದ್ದು ಇವರಿಬ್ಬರ ಜಗಳವನ್ನು ಬಿಡಿಸಿದ್ದಳು. ಗಾಯದಿಂದ ರಕ್ತಸ್ರಾವವಾದರೂ ಚಿಕಿತ್ಸೆ ಪಡೆಯದೇ ಮನೆಯಲ್ಲಿಯೇ ಉಳಿದಿದ್ದರಿಂದ ಹುಶಾರಿಲ್ಲ ಎಂದು ಮಲಗಿದ್ದಲ್ಲಿಯೇ ಮಾ.5 ಶುಕ್ರವಾರದಂದು ಸಂಜೆ ಮೃತಪಟ್ಟಿದ್ದಾರೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸುಳ್ಯ ಆಲ್ ಇಂಡಿಯಾ KMCC ಸಭೆ - ಸೆಪ್ಟೆಂಬರ್ 5 ರಿಂದ 30ರ ವರೆಗೆ ಸದಸ್ಯತ್ವ ಅಭಿಯಾನ

error: Content is protected !!
Scroll to Top