ಮಂಗಳೂರು: ಕೆಎಸ್ಸಾರ್ಟಿಸಿ ಬಸ್ ಗೆ ಸ್ಕೂಟರ್ ಅಡ್ಡ ಇಟ್ಟು ನಿಂದಿಸಿ ಚಾಲಕನ ಕೊಲೆಗೆ ಯತ್ನ ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 06. ಪುತ್ತೂರಿನಿಂದ ಮಂಗಳೂರು ಕಡೆಗೆ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಬಸ್ ಚಾಲಕರೋರ್ವರಿಗೆ ಪಡೀಲ್ ಎಂಬಲ್ಲಿ ಸ್ಕೂಟರ್ ಸವಾರನೊಬ್ಬ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ ಸ್ಕೂಟರ್ ಸವಾರನನ್ನು‌ ಪೊಲೀಸರು ಬಂಧಿಸಿದ ಘಟನೆ ಶುಕ್ರವಾರದಂದು ನಡೆದಿದೆ.

ಬಂಧಿತ ಆರೋಪಿಯನ್ನು ಸೊಹಿಫ್ ಎಂದು ಗುರುತಿಸಲಾಗಿದೆ. ಪುತ್ತೂರು ಡಿಪೋದ ಕೆಎಸ್ಆರ್​​​​ಟಿಸಿ ಬಸ್ ಚಾಲಕ ರಾಜು ಗಜಕೋಶ ಎಂಬವರು ಪುತ್ತೂರಿನಿಂದ ಮಂಗಳೂರು ಕಡೆಗೆ ಬಸ್​ ಚಲಾಯಿಸಿಕೊಂಡು ಹೋಗುತ್ತಿದ್ದ‌ ವೇಳೆ ಬಸ್ ಪಡೀಲ್ ಕಣ್ಣೂರು ತಲುಪುತ್ತಿದ್ದಂತೆಯೇ ಡಿಯೋ ಸ್ಕೂಟರ್ ಸವಾರನೋರ್ವ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿಕೊಂಡು ಬಂದು ಪಡೀಲ್ ರೈಲ್ವೆ ಓವರ್ ಬ್ರಿಡ್ಜ್ ಬಳಿ ತಲುಪಿದಾಗ​​ ಬಸ್ಸಿಗೆ ಡಿಯೋ ಸ್ಕೂಟರ್​ನನ್ನು ಅಡ್ಡಲಾಗಿಟ್ಟು ಸ್ಕೂಟರ್​​ನಿಂದ ಇಳಿದು ಆರೋಪಿ‌ ಸೊಹಿಫ್ ಬಸ್ಸಿನ ಡೋರ್ ಎಳೆದು ಭಾರಿ ವೇಗವಾಗಿ ಬಸ್ ಚಲಾಯಿಸುತ್ತೀಯಾ ಎಂದು ನಿಂದಿಸಿದ್ದಲ್ಲದೇ ಸ್ಕೂಟರ್​ನಿಂದ ಚಾಕು ತೆಗೆದು ಚಾಲಕ ರಾಜು ಗಜಕೋಶರ ಹಲ್ಲೆಗೆ ಮುಂದಾಗಿದ್ದಾನೆ. ಬಸ್ ಚಾಲಕ ರಾಜುಕೋಶ ನೀಡಿದ ದೂರಿನಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Also Read  ಖಾಸಗಿ ಗೋಶಾಲೆಗಳಿಂದ ಅರ್ಜಿ ಆಹ್ವಾನ.

error: Content is protected !!
Scroll to Top