? ಸುಬ್ರಹ್ಮಣ್ಯ: ಉಯ್ಯಾಲೆಯಲ್ಲಿ ಆಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಹಗ್ಗ ಬಿಗಿದು ಬಾಲಕಿ ಮೃತ್ಯು



(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ. 06. ಹುಟ್ಟುಹಬ್ಬದ ದಿನದಂದೇ ಉಯ್ಯಾಲೆಯ ಹಗ್ಗಕ್ಕೆ ಸಿಲುಕಿ ದಾರುಣವಾಗಿ ಬಾಲಕಿಯೋರ್ವಳು ಮೃತಪಟ್ಟ ಘಟನೆ ಕಡಬ ತಾಲೂಕಿನ ಏನೆಕಲ್ಲಿನಲ್ಲಿ ಸಂಭವಿಸಿದೆ.





ಮೃತಳನ್ನು ಯೇನೆಕಲ್ಲು ಗ್ರಾಮದ ಮುತ್ಲಾಜಡ್ಕ ಬಾಬು ಅಜಿಲ ಅವರ ಪುತ್ರಿ ಏನೆಕಲ್ಲು ಸರಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಶೃತಿ(11) ಎಂದು ಗುರುತಿಸಲಾಗಿದೆ. ಶುಕ್ರವಾರದಂದು ಈಕೆಯ ಹುಟ್ಟು ಹಬ್ಬವಾದುದರಿಂದ ಶಾಲೆಗೆ ಹೋಗದೆ ಮನೆಯಲ್ಲೇ ಇದ್ದು ಮದ್ಯಾಹ್ನದ ವೇಳೆ ಮನೆಯ ಪಕ್ಕದಲ್ಲಿದ್ದ ಪೇರಳೆ ಮರಕ್ಕೆ ಕಟ್ಟಲಾದ ಉಯ್ಯಾಲೆಯೊಂದರಲ್ಲಿ ಆಟವಾಡುತ್ತಿದ್ದ ಸಂದರ್ಭ ಉಯ್ಯಾಲೆಯ ಹಗ್ಗ ಕುತ್ತಿಗೆಗೆ ಆಕಸ್ಮಿಕವಾಗಿ ಸಿಲುಕಿ ಈ ದುರ್ಘಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿನಿ ತಂದೆ, ತಾಯಿ, ಮೂವರು ಸಹೋದರರು ಹಾಗೂ ಒರ್ವ ಸಹೋದರಿಯನ್ನು ಅಗಲಿದ್ದಾರೆ. ಈ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top