? ಮಂಗಳೂರು: ಗ್ರಾಹಕನ ಸೋಗಿನಲ್ಲಿ ಬಂದು ಉಂಗುರ ಹಿಡಿದುಕೊಂಡು ಓಟಕ್ಕಿತ್ತ ಖದೀಮ ➤ ಬೆನ್ನಟ್ಟಿ ಹಿಡಿದ ಶಾಪ್ ಮಾಲಕ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 05. ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳನೋರ್ವ ನಗರದ ಜ್ಯುವೆಲ್ಲರಿ ಶಾಪ್ ನಿಂದ ಹಾಡಹಗಲೇ ಉಂಗುರವೊಂದನ್ನು ಕಳವುಗೈದು ಓಡಿದ್ದು ಸ್ವತಃ ಜ್ಯುವೆಲ್ಲರಿ ಸಿಬಂದಿ ಮತ್ತು ಮಾಲಕರೇ ಆತನನ್ನು ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ.

ಅರುಣ್ ಜಿ. ಶೇಟ್ ಎಂಬವರಿಗೆ ಸೇರಿದ ನಗರದ ಅರುಣ್ ಜಿ. ಶೇಟ್ ಜ್ಯುವೆಲ್ಲರಿ ಆ್ಯಂಡ್ ಡೈಮಂಡ್ ವರ್ಕ್ಸ್ ಶಾಪ್ ಗೆ ಗುರುವಾರ ಮಧ್ಯಾಹ 2 ಗಂಟೆಯ ವೇಳೆವೆ ಗ್ರಾಹಕರ ಸೋಗಿನಲ್ಲಿ ಬಂದ ಖದೀಮ, ಆಭರಣವನ್ನು ಖರೀದಿಸುವಂತೆ ನಟಿಸಿದ್ದು, ಮಾಲಕ ಅರುಣ್ ಜಿ.ಶೇಟ್ ಅವರು ಸ್ವತಃ ಆತನಿಗೆ ಆಭರಣ ತೋರಿಸುತ್ತಿದ್ದರು. ಈ ಸಂದರ್ಭ ಆತ ಉಂಗುರವೊಂದನ್ನು ಕೈಗೆ ಹಾಕಿ ನೋಡುತ್ತಲೇ, ಏಕಾಏಕಿ ಆಭರಣದೊಂದಿಗೆ ಹೊರಗೆ ಓಡಿದ್ದಾನೆ. ಇದನ್ನು ಗಮನಿಸಿದ ಜ್ಯುವೆಲ್ಲರಿ ಮಾಲಕ ಅರುಣ್ ಜಿ ಶೇಟ್ ಅವನನ್ನು ಬೆನ್ನಟಿ, ಹಿಡಿಯವಲ್ಲಿ ಯಶಸ್ವಿಯಾಗಿದ್ದಾರೆ. ವಿಷಯ ತಿಳಿದ ತಕ್ಷಣವೇ ಸ್ಥಳದಲ್ಲಿ ಸಾಕಷ್ಟು ಜನರು ಜಮಾಯಿಸಿದ್ದಾರೆ. ಈ ಎಲ್ಲಾ ದೃಶ್ಯ ಜುವೆಲ್ಲರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಬಂದರು ಠಾಣೆಯಲ್ಲಿ ದೂರು ನೀಡಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Also Read  ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ

error: Content is protected !!
Scroll to Top