? ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಈ ವರ್ಷದ ಹಜ್ ಗೆ ಅವಕಾಶ ➤ ಸೌದಿ ಆರೋಗ್ಯ ಸಚಿವಾಲಯ

(ನ್ಯೂಸ್ ಕಡಬ) newskadaba.com ರಿಯಾದ್, ಮಾ. 05. ಪ್ರಸಕ್ತ ವರ್ಷ ವಿದೇಶಗಳಿಂದ ಬರುವ ವಿದೇಶಿ ಯಾತ್ರಾರ್ಥಿಗಳಿಗೂ ಹಜ್ ನಿರ್ವಹಿಸಲು ಅವಕಾಶ ನೀಡಲಾಗುವುದು ಆದರೆ,
ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಮಾತ್ರ ಈ ವರ್ಷದ ಹಜ್ ನಿರ್ವಹಿಸಲು ಅವಕಾಶ ಎಂದು ಸೌದಿ ಆರೋಗ್ಯ ಸಚಿವಾಲಯ ವರದಿ ಪ್ರಕಟಿಸಿದೆ.


ಕೋವಿಡ್ ನಡುವೆಯೂ ಹಜ್ ನಿರ್ವಹಣೆಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ಬಾರಿಯೂ ಕೋವಿಡ್ ಭಯದ ಮಧ್ಯೆ ಹಜ್ ನಡೆಯಲಿದೆ. ಕಳೆದ ವರ್ಷ ಸೌದಿ ಅರೇಬಿಯಾದ ಒಳಗಿನ ಸುಮಾರು 1,000 ಜನರಿಗೆ ಮಾತ್ರ ಹಜ್ ನಿರ್ವಹಿಸಲು ಅವಕಾಶ ನೀಡಲಾಗಿತ್ತು. ಅದರಲ್ಲಿ ಭಾರತೀಯರು ಸೇರಿದಂತೆ ವಿದೇಶಿಯರು ಒಳಗೊಂಡಿದ್ದರು. ಆದರೆ ಈ ವರ್ಷ ವಿದೇಶ ಯಾತ್ರಿಕರು ಭಾಗವಹಿಸಲು ವ್ಯವಸ್ಥೆ ಮತ್ತು ಚರ್ಚೆಗಳು ನಡೆಯುತ್ತಿದ್ದು, ಕೋವಿಡ್ ವಿರುದ್ಧ ಲಸಿಕೆ ಹಾಕಿದವರಿಗೆ ಮಾತ್ರ ಈ ಹಜ್ ನಿರ್ವಹಿಸಲು ಅವಕಾಶವಿರುತ್ತದೆ ಎಂದು ಸೌದಿ ಆರೋಗ್ಯ ಸಚಿವಾಲಯ ವರದಿ ನೀಡಿದೆ. ಯಾತ್ರಾರ್ಥಿಗಳು ಆಗಮಿಸಿದ ಸಮಯದಿಂದ ಹಿಂದಿರುಗುವವರೆಗೂ ವೈದ್ಯಕೀಯ ಸೇವೆ ಅಗತ್ಯವಿರುವುದರಿಂದ ಹಜ್ ಮತ್ತು ಉಮ್ರಾ ಸಚಿವಾಲಯವು ಆರೋಗ್ಯ ಸಚಿವಾಲಯದೊಂದಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಅಗತ್ಯ ವೈದ್ಯಕೀಯ ಸೇವೆ ಸಲ್ಲಿಸಲು ಆಗಮಿಸುವ ಆರೋಗ್ಯ ಕಾರ್ಯಕರ್ತರು ಮತ್ತು ಸಿಬ್ಬಂದಿಗಳ ಕೊರೋನಾ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರವೇ ಪವಿತ್ರ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ.

Also Read  ಲಂಡನ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿಯ ಹತ್ಯೆ

error: Content is protected !!
Scroll to Top