ಉಡುಪಿ: ಚಾಲಕಿಯ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು ➤ 7 ಬೈಕ್ ಗಳು ಜಖಂ

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 05. ಚಾಲಕಿಯ ನಿಯಂತ್ರಣ ತಪ್ಪಿದ ಕಾರೊಂದು ಕಂದಕಕ್ಕೆ ಉರುಳಿದ ಪರಿಣಾಮ ರಸ್ತೆ ಬದಿಯಲ್ಲಿದ್ದ 7 ದ್ವಿಚಕ್ರ ವಾಹನಗಳು ನಜ್ಜುಗುಜ್ಜಾದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯಿಂದ ಮಣಿಪಾಲದ ಕಡೆಗೆ ತೆರಳುತ್ತಿದ್ದ ಕಾರು ಲಕ್ಷ್ಮೀಂದ್ರ ನಗರದ ಬಳಿ ನಿಯಂತ್ರಣ ತಪ್ಪಿ ಕಂದಕಕ್ಕೆ ಇಳಿದಿದ್ದು, ಈ ಸಂದರ್ಭದಲ್ಲಿ 7 ದ್ವಿಚಕ್ರ ವಾಹನಗಳು ಕಾರಿನ ಜೊತೆಗೆ ಮಳೆಗಾಲದಲ್ಲಿ ನೀರು ಹರಿಯುವ ತೋಡಿಗೆ ಬಿದ್ದಿದೆ. ಕೆಳಭಾಗದಲ್ಲಿ ಮರವಿದ್ದ ಕಾರಣ ಕಾರು ಸಂಪುರ್ಣವಾಗಿ ಕಂದಕಕ್ಕೆ ಉರುಳದೆ ವಾಲಿ ನಿಂತಿದೆ. ಅದೃಷ್ಟವಶಾತ್ ಕಾರು ಚಾಲಕಿಗೆ ಯಾವುದೇ ಗಾಯಗಳಾಗಿಲ್ಲ. ರಸ್ತೆ ಬದಿ ನಿಲ್ಲಿಸಲಾಗಿದ್ದ ನ್ಯೂ ಮಣಿಪಾಲ್ ಬಜಾರ್ ನ ಸೆಕೆಂಡ್ ಹ್ಯಾಂಡ್ ವಾಹನಗಳಗೆ ಕಾರು ಡಿಕ್ಕಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Also Read  ಬಹು ನಿರೀಕ್ಷಿತ 'ನಮೋ' ಚಲನಚಿತ್ರ ನಾಳೆ(ಜ.31) ತೆರೆಗೆ ➤ ಕಡಬದ ನಟ ಮಹೇಶ್ ರಾಜ್ ನಟಿಸಿರುವ ಚಿತ್ರ

error: Content is protected !!
Scroll to Top