ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಲ್ಲಿ ಕೋಟ್ಯಾಂತರ ರೂ. ಮರ ಕಳವು ಪ್ರಕರಣ | ಮನೆಗೆ ನುಗ್ಗಿ ದಾಂಧಲೆ ನಡೆಸಿದ ಅರಣ್ಯಾಧಿಕಾರಿಗಳ ವಿರುದ್ದ ನೀತಿ ತಂಡ ಹೋರಾಟ

(ನ್ಯೂಸ್ ಕಡಬ) newskadaba.com ಕಡಬ, ಮಾ.04. ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಲ್ಲಿ ಕೋಟ್ಯಾಂತರ ಬೆಲೆ ಬಾಳುವ ಮರ ಕಳ್ಳತನ ಆಗಿದ್ದರೂ ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಬದಲು, ದೂರು ನೀಡಿದಾತನ ಮೇಲೆಯೇ ಸೇಡು ತೀರಿಸುವ ಪ್ರಯತ್ನ ನಡೆಸುತ್ತಿರುವ ಸಂಚಾರಿ ದಳದ ವಲಯಾರಣ್ಯ ಅಧಿಕಾರಿ ಸಂಧ್ಯಾ ಹಾಗೂ ಅರಣ್ಯಾಧಿಗಳ ವಿರುದ್ದ ಹೋರಾಟ ನಡೆಸಲು ಸಾಮಾಜಿಕ ಕಾರ್ಯಕರ್ತ, ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಸಿದ್ಧತೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿರುವ ಅರಣ್ಯ ಇಲಾಖೆಯವರ ವಿರುದ್ದ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಸಲ್ಲಿಸಲು ಸಿದ್ದತೆ ನಡೆಸುತ್ತಿದ್ದಾರೆ.

Also Read  ಬಿಳಿನೆಲೆ: ವ್ಯಕ್ತಿ ನಾಪತ್ತೆ

ಈ ಬಗ್ಗೆ ಮಾಹಿತಿ ನೀಡಿರುವ ಜಯನ್ ಅವರು ಕೋಟ್ಯಾಂತರ ಮರ ಕಳ್ಳತನ ಆಗಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ, ಮರಕಳ್ಳತನದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾದ ಅಧಿಕಾರಿಗಳ ಸ್ಥರದ ಇನ್ನೋರ್ವ ಅಧಿಕಾರಿ ತನಿಖೆ ನಡೆಸುವುದು ಅಂದರೆ ಏನರ್ಥ..? ಆ ಅಧಿಕಾರಿ ಕೂಡ ರಾತ್ರೋ ರಾತ್ರಿ ಗೂಂಡಾಗಳ ರೀತಿಯಲ್ಲಿ ವರ್ತಿಸಿ ಮಹಿಳೆಯರು, ಮಕ್ಕಳಿಗೆ ಹಲ್ಲೆ ನಡೆಸುತ್ತಿದ್ದಾರೆ ಎಂದರೆ ಇದನ್ನು ಕೇಳುವವರು ಯಾರು ಇಲ್ಲವೇ, ಕೂಡಲೇ ನ್ಯಾಯಾಲಯ ಮಧ್ಯಪ್ರವೇಶಿಸಿ ಸುಬ್ರಹ್ಮಣ್ಯ ವಲಯ ಅರಣ್ಯದಲ್ಲಿ ಬೇರೆ ಬೇರೆ ವಿಭಾಗದಲ್ಲಿ ನಡೆದಿರುವ ಭ್ರಷ್ಟಚಾರವನ್ನು ತನಿಖೆ ನಡೆಸಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

Also Read  ಕಡಬ: ಕಾಡಾನೆ ದಾಳಿ- ವ್ಯಕ್ತಿ ಗಂಭೀರ

 

 

error: Content is protected !!
Scroll to Top