ಕಡಬ: ಅಕ್ರಮ ಮರ ಸಾಗಾಟದ ದೂರು ನೀಡಿದ್ದ ವ್ಯಕ್ತಿಯ ವಿರುದ್ದವೇ ಪ್ರಕರಣ ದಾಖಲಿಸಿದ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ಮಾ. 04. ಅಕ್ರಮ ಮರ ಲೂಟಿ ವಿರುದ್ಧ ದೂರು ನೀಡಿದ್ದಾರೆನ್ನಲಾದ ವ್ಯಕ್ತಿಯ ಮನೆಗೆ ರಾತ್ರೋ ರಾತ್ರಿ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಹಳೆಯ ಪ್ರಸಾದ್ ಎಂಬವರ ಮನೆಯಲ್ಲಿದ್ದ ಮರದ ಹಲಗೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಸಾದ್ ಅವರು ಅಕ್ರಮವಾಗಿ ಮರ ಕಡಿದು ಮನೆಯಲ್ಲಿ ಶೇಖರಣೆ ಮಾಡಿದ್ದಾರೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಮಂಗಳವಾರದಂದು ತಡರಾತ್ರಿ ಸಂಚಾರಿ ದಳದ ಸಂಧ್ಯಾ ಅವರ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ರಾಘವೇಂದ್ರ ಅವರು, ಪ್ರಸಾದ್ ಅವರ ಮನೆಗೆ ದಾಳಿ ನಡೆಸಿದಾಗ ಹೆಬ್ಬಲಸು ಮರಗಳು ದೊರೆತಿದ್ದು, ಇದಕ್ಕೆ ಸಂಬಂಧಿಸಿ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ. ಸುಬ್ರಹ್ಮಣ್ಯ ವಲಯದ ಐತ್ತೂರು ಗ್ರಾಮದ ರಕ್ಷಿತಾರಣ್ಯದಿಂದ ಕೋಟ್ಯಾಂತರ ರೂ. ಮೌಲ್ಯದ ಮರಗಳನ್ನು ಲೂಟಿ ಮಾಡಲಾಗಿದ್ದು, ಇದರಲ್ಲಿ ಸ್ಥಳೀಯ ಅರಣ್ಯಾಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಪ್ರಸಾದ್ ಅವರು ದೂರು ನೀಡಿದ್ದರು. ಇದೀಗ ಮತ್ತೆ ಅಧಿಕಾರಿಗಳು ದೂರುದಾರನ ವಿರುದ್ದವೇ ಪ್ರಕರಣ ದಾಖಲಿಸಿದ್ದಾರೆ.

Also Read  ಯಕ್ಷಗಾನ ಕಲೆಯನ್ನು ಅವಮಾನ ಮಾಡಿದ ದಿಗ್ವಿಜಯ್ ಚಾನೆಲ್ ನಿರೂಪಕ ರಕ್ಷಿತ್ ಶೆಟ್ಟಿ ➤ ಕ್ಷಮೆ ಕೇಳಲು ಪಟ್ಟು ಹಿಡಿದ ಕಲಾಭಿಮಾನಿಗಳು

error: Content is protected !!
Scroll to Top