? ಉಪ್ಪಿನಂಗಡಿ: ವಾಟ್ಸಪ್ ನಲ್ಲಿ ರಾಮಮಂದಿರ ನಿರ್ಮಾಣದ ಸ್ಟೇಟಸ್ ಹಾಕಿದ್ದ ಹಿನ್ನೆಲೆ ➤ ಹಿಂದೂ ಯುವಕನ ಹಲ್ಲೆಗೆತ್ನಿಸಿದ ಮುಸ್ಲಿಂ ಯುವಕ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ. 03. ರಾಮ ಮಂದಿರ ನಿರ್ಮಾಣದ ಸ್ಟೇಟಸ್ ವಾಟ್ಸಪ್ ನಲ್ಲಿ ಹಾಕಿದ್ದಾನೆ ಎಂಬ ಕಾರಣಕ್ಕೆ ಮುಸ್ಲಿಂ ಯುವಕ ಹಿಂದೂ ಯುವಕನ ಮನೆಗೆ ತೆರಳಿ ಹಲ್ಲೆಗೆತ್ನಿಸಿದ ಘಟನೆ ಆದರ್ಷನಗರ ಎಂಬಲ್ಲಿ ಮಂಗಳವಾರದಂದು ನಡೆದಿದೆ.

ಆದರ್ಶನಗರ ನಿವಾಸಿ ಮುಕುಂದ್ ಎಂಬವರು ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ರಾಮ ಮಂದಿರ ನಿರ್ಮಾಣದ ಸ್ಟೇಟಸ್ ಹಾಕಿದ್ದ ಕಾರಣ ತಡರಾತ್ರಿ ಆತನ ಮನೆಗೆ ತೆರಳಿ ಮನೆಯಲ್ಲಿರುವ ಮಹಿಳೆಯರನ್ನು ಲೆಕ್ಕಿಸದೆ ಆವರಣದ ಗೇಟ್ ಬಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ತಕ್ಷಣವೇ ಮಾಹಿತಿ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಬೇಟಿ ನೀಡಿ ಯುವಕನಿಗೆ ಹಾಗೂ ಮನೆಯವರಿಗೆ ದೈರ್ಯ ತುಂಬಿದ್ದಾರೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ ➤ ರಿಕ್ಷಾ ಚಾಲಕ ಸಹಿತ ಇಬ್ಬರ ಬಂಧನ

error: Content is protected !!
Scroll to Top