ಕಡಬ: ಐತ್ತೂರು ರಕ್ಷಿತಾರಣ್ಯದಿಂದ ಅಕ್ರಮ ಮರ ಸಾಗಾಟದ ಕುರಿತು ದೂರು ನೀಡಿದ್ದ ಹಿನ್ನೆಲೆ ➤ ಪ್ರಸಾದ್ ಎಂಬವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ಮಾ. 03. ಬಿಳಿನೆಲೆ ರಕ್ಷಿತಾರಣ್ಯದಲ್ಲಿದ್ದ ನೂರಾರು ಮರಗಳ ಅಕ್ರಮ ಸಾಗಾಟದ ಕುರಿತು ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನೆಲೆ ಬಿಳಿನೆಲೆ ಪ್ರಸಾದ್ ಎಂಬವರ ಮನೆಗೆ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಮನೆಯಲ್ಲಿದ್ದ ಹಿರಿಯ ಜೀವಗಳ ಮೇಲೆ ಹಲ್ಲೆ ನಡೆಸಿದ ಘಟನೆ ಐತ್ತೂರು ಗ್ರಾಮದ ಮೂಜೂರು ಎಂಬಲ್ಲಿ ನಡೆದಿದೆ.


ಸ್ಥಳೀಯ ನಿವಾಸಿ ಬಿಳಿನೆಲೆಯ ಪ್ರಸಾದ್ ಎಂಬವರು ಇಲ್ಲಿ‌ನ ರಕ್ಷಿತಾರಣ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರ ಸಾಗಾಟದ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಲ್ಲದೇ ಮಾಧ್ಯಮಗಳಿಗೂ ಕುರಿತು ಮಾಹಿತಿಯನ್ನು ನೀಡಿದ್ದರು. ಈ ಹಿನ್ನಲೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವೊಂದು ಮಂಗಳವಾರ ಮಧ್ಯರಾತ್ರಿ ಪ್ರಸಾದ್ ಅವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ಅಕ್ರಮಗಳನ್ನು ಪ್ರಶ್ನಿಸಿ ದೂರು ನೀಡಿದ್ದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಸಾದ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಮಧ್ಯರಾತ್ರಿ 1.30 ರ ಸುಮಾರಿಗೆ ಮನೆಗೆ ನುಗ್ಗಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಮನೆಯಲ್ಲಿದ್ದವರ ಮೇಲೂ ಹಲ್ಲೆ ನಡೆಸಿದ್ದಾರೆ, ಅಲ್ಲದೆ 30 ವರ್ಷಗಳ ಹಿಂದೆ ಪ್ರಸಾದ್ ತಂದೆ ಮಾಡಿಸಿದ್ದ ಮನೆ ಮಹಡಿಗೆ ಮುಚ್ಚಿಗೆ ಹಾಕಿದ್ದ ಮರದ ಹಲಗೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕೊಂಡೊಯ್ದಿದ್ದಾರೆ. ಮಾಧ್ಯಮಗಳಿಗೆ ಮರಕಳ್ಳ ಸಾಗಾಟದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಈ ರೀತಿ ಮಾಡಿರುವುದಾಗಿ ಮನೆಯವರಿಗೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

Also Read  ಮಾದಕ ವಸ್ತು ಮಾರಾಟಕ್ಕೆ ಯತ್ನ ➤ ಎಂಡಿಎಂಎ ಸಹಿತ ಆರೋಪಿ ವಶಕ್ಕೆ

error: Content is protected !!
Scroll to Top