ಪುತ್ತೂರು: ಮಹಿಳಾ ಠಾಣಾ ಎಸ್.ಐ ಮೇಲೆ ಹಲ್ಲೆ ಆರೋಪ ➤ ಸಹೋದರಿಯರಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 02. ದೂರು ಅರ್ಜಿಯೊಂದರ ವಿಚಾರಣೆಯ ವೇಳೆ ಪುತ್ತೂರು ಮಹಿಳಾ ಠಾಣಾ ಎಸ್.ಐ ಸೇಸಮ್ಮ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.


ಬಂಧಿತ ಆರೋಪಿಗಳನ್ನು ಸಾಲ್ಮರ ಮುದ್ದೋಡಿ ನಿವಾಸಿ ಲಾರೆನ್ಸ್ ಡಿಸೋಜ ಅವರ ಪತ್ನಿ ಬೇಬಿ ಡಿಸೋಜ(34) ಹಾಗೂ ಹಾಸನ ಚೆನ್ನರಾಯಪಟ್ಟಣದ ನುಗ್ಗೆಹಳ್ಳಿ ನೆಟ್ಟಕೆರೆ ಗೋಪಾಲ ಎಂಬವರ ಪತ್ನಿ ಆಶಾ(35) ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಎಸ್.ಐ ಸೇಸಮ್ಮ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಡಿಸ್ಚಾರ್ಜ್ ಮಾಡಲಾಗಿದೆ. ಸಂಬಂಧಿಗಳಾದ ಮಹಿಳಾ ಆರೋಪಿಗಳು ಒಬ್ಬರಿಗೊಬ್ಬರ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದು, ಇದರ ವಿಚಾರಣೆಯ ವೇಳೆ ಬೇಬಿ ಡಿಸೋಜ ಅವರ ಅಕ್ಕ ಹಾಸನದಲ್ಲಿರುವ ಆಶಾ ಅವರ ಜೊತೆಗೆ ಬಂದಿದ್ದರು. ಕೌಟುಂಬಿಕ ಕಲಹದ ಈ ಅರ್ಜಿಯನ್ನು ಎಸ್.ಐ ಅವರು ವಿಚಾರಣೆ ನಡೆಸುತ್ತಿರುವಾಗ ಬೇಬಿ ಎಂಬವರ ಪತಿ ಲಾರೆನ್ಸ್ ಡಿಸೋಜಾ ಗೆ ಹಲ್ಲೆ ನಡೆಸಲು ಮುಂದಾಗಿದ್ದರು. ಇದನ್ನು ತಡೆಯಲು ಬಂದ ಎಸ್.ಐ ಸೇಸಮ್ಮ ಅವರ ಮೇಲೆ ಬೇಬಿ ಡಿಸೋಜ ಮತ್ತು ಆಕೆಯ ಅಕ್ಕ ಆಶಾ ಅವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಕುರಿತು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಯೋರ್ವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ನೆಲ್ಯಾಡಿ: ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ ➤ 29 ಜಾನುವಾರುಗಳ ಸಹಿತ ಓರ್ವನ ಬಂಧನ, ಮೂವರು ಪರಾರಿ

error: Content is protected !!
Scroll to Top