? ಸುರತ್ಕಲ್: ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ➤ ಮಹಿಳೆಯ ರಕ್ಷಣೆ, ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 01. ಸುರತ್ಕಲ್ ಸಮೀಪದ ಬಾಳ ಗ್ರಾಮದ ಲಾಡ್ಜ್ ಒಂದಕ್ಕೆ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಹಳೆಯಂಗಡಿ ತೋಕೂರು ನಿವಾಸಿ ಹರೀಶ್ (42) ಹಾಗೂ ಬಂಟ್ವಾಳ ತಾಲೂಕಿನ ಮೂಡ ನಡುಗೋಡು ನಿವಾಸಿ ಲೋಕನಾಥ್(42) ಎಂದು ಗುರುತಿಸಲಾಗಿದೆ. ಆರೋಪಿಗಳು ಬಾಳ ಗ್ರಾಮದಲ್ಲಿರುವ ಬಿಎಎಸ್ಎಫ್ ಫ್ಯಾಕ್ಟರಿಯ ಎದುರಿನ ಫೆರಾವೊ ಕಾಂಪ್ಲೆಕ್ಸ್ ನ ರೂಂ ನಂ 205 ರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ. ವೇಶ್ಯಾವಾಟಿಕೆ ದಂಧೆಯಲ್ಲಿ ನಿರತರಾಗಿದ್ದ ಬೆಂಗಳೂರು ಉತ್ತರ ಹಳ್ಳಿಯ ನಿವಾಸಿ ನೊಂದ ಮಹಿಳೆಯೋರ್ವರನ್ನು ರಕ್ಷಣೆ ಮಾಡಲಾಗಿದೆ.

Also Read  ಕೊರೋನಾ ಅಪ್‍ಡೇಟ್ : ಇಂದು ಪುತ್ತೂರಿನ 6 ಮಂದಿಯಲ್ಲಿ ಕೋವಿಡ್ ದೃಢ

error: Content is protected !!
Scroll to Top