ಕಡಬ ಗೃಹರಕ್ಷಕದಳದ ಘಟಕಕ್ಕೆ ಜಿಲ್ಲಾ ಕಮಾಂಡೆಂಟ್ ಡಾ| ಮುರಳಿ ಮೋಹನ ಚೂಂತಾರು ಭೇಟಿ ಮುಖ್ಯ ಮಂತ್ರಿ ಪದಕ ಪುರಸ್ಕೃತ ಜಿಲ್ಲಾ ಕಮಾಂಡೆಂಟ್ ಅವರಿಗೆ ಕಡಬ ಘಟಕದಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಮಾ. 01. ಇಲ್ಲಿನ ಗೃಹರಕ್ಷಕ ದಳ ಘಟಕಕ್ಕೆ ಜಿಲ್ಲಾ ಕಮಾಂಡೆಂಟ್ ಡಾ| ಮುರಳಿ ಮೋಹನ್ ಚೂಂತಾರು ಅವರು ಫೆ. 28ರಂದು ಭೇಟಿ ನೀಡಿ, ಬಳಿಕ ಘಟಕದ  ವತಿಯಿಂದ ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಡಬ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೃಹರಕ್ಷಕದಳದಿಂದ ನಡೆದ ಕವಾಯತ್ತನ್ನು ವೀಕ್ಷಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್‌ ನ ಕಡಬ ಘಟಕದ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಅವರು ಮಾತನಾಡಿ, ಸತ್ಯ, ನ್ಯಾಯ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದಾಗ ಯಶಸ್ಸು ಖಂಡಿತಾ, ನಾವು ಯಾವುದೇ ಸೇವೆ ಮಾಡುವಾಗ ಪ್ರತಿಫಲಾಪೇಕ್ಷೆಯನ್ನು ಇಟ್ಟುಕೊಳ್ಳಬಾರದು, ಆದರೇ ಪ್ರತಿಫಲವನ್ನು ದೇವರು ಕೊಟ್ಟೆ ಕೊಡುತ್ತಾನೆ ಎಂದ ಅವರು ಜಿಲ್ಲಾ ಕಮಾಂಡೆಂಟ್ ಆಗಿ ಎರಡನೇ ಬಾರಿಗೆ ನೇಮಕಗೊಂಡ ಮುರಳಿ ಮೋಹನ ಚೂಂತಾರು ಅವರಿಗೆ ಸಹಜವಾಗಿಯೇ ಮುಖ್ಯಮಂತ್ರಿ ಪದಕ ಲಭಿಸಿದೆ. ಅವರ ಕಾರ್ಯ ನಿಷ್ಠೆ ಶ್ಲಾಘನಿಯ ಎಂದರು. ಈ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ಪದಕಕ್ಕೆ ಭಾಜನರಾದ ಹಾಗೂ ಎರಡನೆಯ ಬಾರಿ ಕಮಾಂಡೆಂಟ್ ಆಗಿ ಅಧಿಕಾರ ವಹಿಸಿಕೊಂಡ ಜಿಲ್ಲಾ ಕಮಾಂಡೆಂಟ್ ಡಾ| ಮುರಳಿ ಮೋಹನ ಚೂಂತಾರು ಅವರು ಕಡಬ ಗೃಹರಕ್ಷಕ ದಳದ ಪರವಾಗಿ ಜನಾರ್ದನ ಗೌಡ ಅವರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಜಿಲ್ಲಾ ಕಮಾಂಡೆಂಟ್ ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಕಡಬ ಗೃಹರಕ್ಷಕ ದಳದ ಎಸ್.ಎಲ್. ಉದಯಶಂಕರ್, ಗೃಹರಕ್ಷಕರಾದ ಸಂದೇಶ್, ಲೊಲಾಕ್ಷ, ಇವರು ಅತಿಥಿಗಳಿಗೆ ಹೂ ಗುಚ್ಚ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕಡಬ ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು. ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ಅಮೈ ಜಿಲ್ಲಾ ಕಮಾಂಡೆಂಟ್ ಅವರಿಗೆ ಗೌರವರ್ಪಣೆ ಸಲ್ಲಿಸಿ. ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Also Read  ಕಾಣಿಯೂರು: ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆ ➤ ಆಸ್ಪತ್ರೆ ಸೀಲ್ ಡೌನ್

error: Content is protected !!
Scroll to Top