ಅಡ್ಯಾರ್ ಕಣ್ಣೂರು: ನವವಿವಾಹಿತೆ ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 01. ನಿನ್ನೆ ತಾನೇ ವಿವಾಹವಾಗಿದ್ದ ಮದುಮಗಳೋರ್ವಳು ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಎಂಬಲ್ಲಿ ನಡೆದಿದೆ.

ಮೃತರನ್ನು ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ(23) ಎಂದು ಗುರುತಿಸಲಾಗಿದೆ. ಈಕೆಯ ವಿವಾಹವು ನಿನ್ನೆ(ಫೆ. 28) ಕಣ್ಣೂರಿನ ಮುಬಾರಕ್ ಎಂಬವರೊಂದಿಗೆ ಅಡ್ಯಾರ್ ಗಾರ್ಡನ್‌ ನಲ್ಲಿ ನೆರವೇರಿತ್ತು. ಆ ಬಳಿಕ ನವಜೋಡಿಗಳು ಆಫಿಯಾ ಮನೆಯಲ್ಲೇ ಇದ್ದು, ಬೆಳಗ್ಗಿನ ಜಾವ 3 ಗಂಟೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಧುವಿನ ಅಕಾಲಿಕ ಮರಣದಿಂದಾಗಿ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

Also Read  ಕುಕ್ಕೆ ಸುಬ್ರಹ್ಮಣ್ಯ ಹೆಸರಿನಲ್ಲಿ ಭಕ್ತರಿಗೆ ವಂಚಿಸಿದ ಆರೋಪ► ಸಂಪುಟ ನರಸಿಂಹ ಸ್ವಾಮಿ ಮಠದ ವಿರುದ್ಧದ ಎಫ್‌ಐಆರ್ ಹೈಕೋರ್ಟ್ ತಡೆ

error: Content is protected !!
Scroll to Top