ಟೈಲ್ಸ್ & ಸ್ಯಾನಿಟರಿವೇರ್ ಗೆ ಐಟಿ ದಾಳಿ ➤ 220 ಕೋಟಿ ರೂ. ಕಪ್ಪು ಹಣ ಪತ್ತೆ

(ನ್ಯೂಸ್ ಕಡಬ) newskadaba.com ಚೆನ್ನೈ, ಫೆ. 28. ಇಲ್ಲಿನ ಪ್ರಮುಖ ಟೈಲ್ಸ್ ಹಾಗೂ ಸ್ಯಾನಿಟರಿವೇರ್ ಉತ್ಪಾದನಾ ಕಂಪೆನಿಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 200 ಕೋಟಿ ರೂ. ಕಪ್ಪು ಹಣವನ್ನು ಪತ್ತೆ ಮಾಡಿದೆ ಎಂದು ನೇರ ತೆರಿಗೆಯ ಕೇಂದ್ರ ಮಂಡಳಿ ತಿಳಿಸಿದೆ.

ಫೆಬ್ರವರಿ 26ರಂದು ದಾಳಿ ನಡೆಸಲಾಗಿದ್ದು, ತಮಿಳುನಾಡು, ಗುಜರಾತ್ ಹಾಗೂ ಕೋಲ್ಕತಾದ ಒಟ್ಟು 20 ಕಟ್ಟಡಗಳಲ್ಲಿ ಶೋಧ ಹಾಗೂ ಸರ್ವೆ ಕಾರ್ಯ ನಡೆಸಲಾಗಿದ್ದು, ಟೈಲ್ಸ್ ಹಾಗೂ ಸ್ಯಾನಿಟರಿವೇರ್‌ ಉತ್ಪಾದನೆ ಹಾಗೂ ಮಾರಾಟದ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಸಮೂಹ ಸಂಸ್ಥೆಯಲ್ಲಿ ನಡೆಸಲಾದ ದಾಳಿ ವೇಳೆ 8.30 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಈ ತನಕ ಆದಾಯ 220 ಕೋಟಿ ರೂ.ವನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

Also Read  2023 ರ ಏಷ್ಯಾಕಪ್‌- ತಂಡದ ಲಿಸ್ಟ್ ಪ್ರಕಟಿಸಿದ ಭಾರತ

error: Content is protected !!
Scroll to Top