ಮುರುಡೇಶ್ವರ ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ ➤ ಈಜಲು ಇಳಿದಿದ್ದ ವೇಳೆ ದುರ್ಘಟನೆ

(ನ್ಯೂಸ್ ಕಡಬ) newskadaba.com ಕಾರವಾರ, ಫೆ. 28. ಸಮುದ್ರ ಪಾಲಾಗುತ್ತಿದ್ದ ಒಂದೇ ಕುಟುಂಬದ ಮೂವರು ಪ್ರವಾಸಿಗರನ್ನು ರಕ್ಷಿಸಿದ ಘಟನೆ ಮುರುಡೇಶ್ವರ ಕಡಲ ತೀರದಲ್ಲಿ ನಡೆದಿದೆ.

ರಕ್ಷಣೆಯಾದವರನ್ನು ಮೂಲತಃ ಬೆಂಗಳೂರಿನ ಕತ್ರಗುಪ್ಪೆ ನಿವಾಸಿಗಳಾದ ಸಂಜನ(15), ಸಂಜಯ್( 18) ಹಾಗೂ ಕಮಲಮ್ಮ (40) ಎಂದು ಗುರುತಿಸಲಾಗಿದೆ. ಒಂದೇ ಕುಟುಂಬದ ಐವರು ವೀಕೆಂಡ್ ಆದ ಕಾರಣ ಮುರುಡೇಶ್ವರ ಸಮುದ್ರ ತೀರಕ್ಕೆ ವಿಹಾರಕ್ಕೆಂದು ತೆರಳಿ ಈಜಲೆಂದು ಸಮುದ್ರಕ್ಕೆ ಇಳಿದಾ ಅಲೆಯ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಇವರನ್ನು ಗಮನಿಸಿದ ಓಷಿಯನ್ ಅಡ್ವೆಂಚರ್ ಸಂಜೀವ್ ಹರಿಕಾಂತ್ ಹಾಗೂ ಚಂದ್ರಶೇಖರ ದೇವಾಡಿಗ ಎಂಬವರು ಬೋಟ್ ಮೂಲಕ ತೆರಳಿ ರಕ್ಷಿಸಿದ್ದಾರೆ.

Also Read  ಕಾಣಿಯೂರು: ಟಿಪ್ಪರ್ ಗಳ ನಡುವೆ ಢಿಕ್ಕಿ ► ರೈಲ್ವೇ ಮೇಲ್ಸೇತುವೆಯಲ್ಲಿ ತಪ್ಪಿದ ಅನಾಹುತ

error: Content is protected !!
Scroll to Top