ಭಾರತೀಯ ನೌಕಾದಳಕ್ಕೆ ಕಡಬದ ಪ್ರಜ್ವಲ್ ನೇಮಕ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಫೆ. 28. ರೆಂಜಿಲಾಡಿ ಗ್ರಾಮದ ಎಳುವಾಳೆ ಮನೆತನದ ಕೇಪುಂಜ ಪ್ರಜ್ವಲ್ ಎಂಬವರು ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿದ್ದಾರೆ.

ಉಜಿರೆ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಈತ ಭಾರತೀಯ ನೌಕಾದಳ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿಯೂ ತೇರ್ಗಡೆ ಹೊಂದಿ ನೌಕಾದಳಕ್ಕೆ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ಒರಿಸ್ಸಾದ ಚಿಲ್ಕಾ ಎಂಬಲ್ಲಿ ನೌಕಾದಳದ ತರಬೇತಿ ಪಡೆಯುತ್ತಿದ್ದಾರೆ. ರೆಂಜಿಲಾಡಿ ಗ್ರಾಮದ ಕೇಪುಂಜ ಪ್ರಗತಿಪರ ಕೃಷಿಕ ಪದ್ಮನಾಭ ಗೌಡ ಹಾಗುಯ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ರಜಿತಾ ಕೆ. ದಂಪತಿಯ ಪುತ್ರ. ಇವರು ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಚಿನ್ಮಯ ವಿದ್ಯಾಮಂದಿರದಲ್ಲಿ ಕಲಿತು, ಪ್ರೌಢಶಿಕ್ಷಣವನ್ನು ರೆಂಜಿಲಾಡಿ ಸಾಂತೋಮ್ ವಿದ್ಯಾಸಂಸ್ಥೆ ಹಾಗೂ ಪಿಯುಸಿ ವಿದ್ಯಾಭ್ಯಾಸವನ್ನು ರಾಮಕುಂಜೇಶ್ವರ ಕಾಲೇಜಿನಲ್ಲಿ ಪಡೆದಿದ್ದಾರೆ.

Also Read  ದ.ಕ :ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎರಡನೇ ಹಂತದ ಮತದಾನ ಆರಂಭಗೊಂಡಿದೆ

error: Content is protected !!
Scroll to Top