ಅರಂತೋಡು: ರಾಷ್ಟ್ರೀಯ ಹೆದ್ದಾರಿ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 28. ಅರಂತೋಡು ಗ್ರಾಮ ಪಂಚಾಯತ್ ಹಾಗೂ ಎಸ್ಎಲ್ಆರ್ ಎಮ್ ಸಂಘ ಮತ್ತು ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಭಾನುವಾರದಂದು ಅರಂತೋಡು ಪೇಟೆಯ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು.

ಕೊರೋನಾ ಭೀತಿಯಿಂದ ತಾತ್ಕಾಲಿಕವಾಗಿ ವಿರಾಮ ನೀಡಿದ್ದ ಸ್ವಚ್ಛತಾ ಕಾರ್ಯಕ್ರಮವು ಮತ್ತೆ ಮರು ಹುಟ್ಟು ಪಡೆದು ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಮ್.ಆರ್. ಜಯಪ್ರಕಾಶ್, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ, ಅರಂತೋಡು ಪಂಚಾಯತ್ ಸದಸ್ಯರಾದ ಶಿವಾನಂದ ಕುಕ್ಕುಂಬಳ, ಪುಷ್ಪಾಧರ, ವೇಣು ಪೆತ್ತಾಜೆ, ವಿನೋದ ತೊಡಿಕಾನ, ಭವಾನಿ ತೊಡಿಕಾನ, ಮಾಲಿನಿ ಉಳುವಾರು, ಶಶಿಧರ ತೊಡಿಕಾನ, ಎಸ್ ಎಲ್ಎಮ್ಆರ್ ಮೇಲ್ವಿಚಾರಕಿ ಸೌಮ್ಯ ಅಡ್ಯಡ್ಕ, ತೊಡಿಕಾನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಅರಂತೋಡು ಭಜನಾ ಮಂಡಳಿ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ಸೋಮಶೇಖರ ಪೈಕ, ಭಾರತಿ ಉಳುವಾರು, ನಿತ್ಯಾನಂದ ಚೆನ್ನಡ್ಕ, ಪಸೀಲು, ಚಂದ್ರಶೇಖರ, ಪಂಚಾಯತ್ ಸಿಬ್ಬಂದಿಗಳಾದ ಮೋಹನ್ ದೇರಾಜೆ, ಈಶ್ವರ ಉಳುವಾರು, ಚೌಕಾರ್ ಮೊದಲಾದವರು ಭಾಗವಹಿಸಿದ್ದರು.

Also Read  ಜ.27ರಂದು ಬೆಂಗಳೂರಿನಲ್ಲಿ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶ

error: Content is protected !!
Scroll to Top