ಶಾಲೆಗೆ ತೆರಳಿದ್ದ 317ಕ್ಕೂ ಅಧಿಕ ಬಾಲಕಿಯರ ಅಪಹರಣ..!

(ನ್ಯೂಸ್ ಕಡಬ) newskadaba.com ಉತ್ತರನೈಜೀರಿಯಾ, ಫೆ. 27. ವಸತಿ ಶಾಲೆಯೊಂದರಿಂದ 317ಕ್ಕೂ ಅಧಿಕ ಬಾಲಕಿಯರನ್ನು ಬಂದೂಕುಧಾರಿಗಳು ಅಪಹರಿಸಿರುವ ಘಟನೆ ಉತ್ತರ ನೈಜೀರಿಯಾದಲ್ಲಿ ನಡೆದಿದೆ.

ನೈಜೀರಿಯಾದ ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯಿಂದ ವಿದ್ಯಾರ್ಥಿನಿಯರ ಸಾಮೂಹಿಕ ಅಪಹರಣ ಮಾಡಲಾಗಿದ್ದು, ಪೊಲೀಸ್‌ ಮತ್ತು ಮಿಲಿಟರಿ ಪಡೆ ವಿದ್ಯಾರ್ಥಿನಿಯರ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಶಾಲೆಯ ಸಮೀಪವೇ ದೊಡ್ಡ ಪ್ರಮಾಣದ ಸೇನಾ ಪಡೆಯಿದ್ದರೂ, ಬಾಲಕಿಯರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ, ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ಅವರ ಪೋಷಕರ ಬಳಿ ತಲುಪಿಸುವುದೇ ನಮ್ಮ ಮೂಲ ಉದ್ದೇಶ. ಹಣಕ್ಕಾಗಿ ಮುಗ್ಧ ಮಕ್ಕಳನ್ನು ಅಪಹರಿಸಿ, ಬೆದರಿಕೆಯೊಡ್ಡುವ ಬಂಡುಕೋರರಿಗೆ ನಾವು ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.

Also Read  ಕೊರೋನ ವೈರಸ್‌ಗೆ ಒಂದೇ ದಿನ ಅಮೆರಿಕಾದಲ್ಲಿ 2,600 ಜನ ಬಲಿ, ಸೋಂಕಿತರ ಪ್ರಮಾಣವೂ ಹೆಚ್ಚಳ

error: Content is protected !!
Scroll to Top