ಕಡಬ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ➤ ಅಪ್ರಾಪ್ತ ಬಾಲಕನ ಬಂಧನ

(ನ್ಯೂಸ್ ಕಡಬ) newskadaba.com ಆಲಂಕಾರು, ಫೆ. 27. ವಾಟ್ಸಾಪ್ ಮೂಲಕ ಧರ್ಮ ನಿಂದನೆ ಧ್ವನಿ ಸಂದೇಶ ರವಾನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಡಗನ್ನೂರು ಕೊಯಿಲದ ಅಪ್ರಾಪ್ತ ಯುವಕನನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಯುವಕನೋರ್ವ ಧರ್ಮ ನಿಂದನೆ ಧ್ವನಿ ಸಂದೇಶ ರವಾನೆ ಮಾಡಿ ಕೋಮು ಸೌಹಾರ್ದತೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವುದಾಗಿ ಇತ್ತೀಚೆಗೆ ಕೂರ್ನಡ್ಕದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಮೊಬೈಲ್ ನಂಬರ್ ಒಂದರಿಂದ ಅಲ್ಲಾಹು, ಪೈಗಂಬರ್, ಟಿಪ್ಪು ಹಾಗೂ ಮುಸ್ಲಿಂ ಹೆಣ್ಣು ಮಕ್ಕಳನ್ನು ನಿಂದಿಸಿ, ಧರ್ಮ ನಿಂದನೆ ಹಾಗೂ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಕುರಿತು ತನಿಖೆ ಕೈಗೊಂಡಿರುವ ಸೈಬರ್ ಕ್ರೈಂ ಪೊಲೀಸರು ಬಡಗನ್ನೂರು ಗ್ರಾಮದ ಕೊಯಿಲದ ಅಪ್ರಾಪ್ತ ಯುವಕನೋರ್ವನನ್ನು ಬಂಧಿಸಿದ್ದಾರೆ.

Also Read  ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ಇಡೀ ಗ್ರಾಮಕ್ಕೆ ಊಟ ಹಾಕಿಸಿದ ವೃದ್ಧ ಮಹಿಳೆ

error: Content is protected !!
Scroll to Top