ಬೆಲೆಯೇರಿಕೆ ವಿರೋಧಿಸಿ ಮಾ. 02ರಂದು ಕಡಬದಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 27. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನನಿತ್ಯದ ಆಹಾರ ಧಾನ್ಯಗಳ ಬೆಲೆಯೇರಿಕೆಯನ್ನು ವಿರೋಧಿಸಿ ಮಾ. 02ರಂದು ಕಡಬ ಮೇಲಿನ ಪೇಟೆಯಲ್ಲಿ ಪ್ರತಿಭಟನಾ ಸಭೆಯು ನಡೆಯಲಿದೆ.


ಕೃಷಿ ಕಾರ್ಮಿಕ ವಿರುದ್ದದ ನೀತಿ ಹಾಗೂ ಕೊರೋನಾದಿಂದ ಬಸವಳಿದ ಜನ ಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಸರಕಾರದ ಹೊಸ ಕಾನೂನು ಮತ್ತು ಹೊಸ ನೀತಿಯಿಂದ ಬಡಜನತೆ ಕಂಗಾಲಾಗಿದ್ದಾರೆ. ಇದರ ವಿರುದ್ದ ಪ್ರತಿಭಟನಾ ಸಭೆ ಹಾಗೂ ಸರಕಾರಗಳಿಗೆ ಮನವಿ ಸಮರ್ಪಣೆಯು ತಹಶೀಲ್ದಾರ್ ಮೂಲಕ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಯ್ಯದ್ ಮೀರಾ ಸಾಹೇಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿ              ಪ್ರಯಾಣಿಕರ ಸ್ಥಿತಿ ಗಂಭೀರ..!

error: Content is protected !!
Scroll to Top